ಆ ಸಮಯ…ಆನಂದಮಯ… “ಎಷ್ಟೊತ್ತಾಯ್ತು ಬಂದು?’ ” ಚಹ ಅಥವಾ ಕಾಫಿ?” “ಇಲ್ಲ , ಇಲ್ಲ, ಬೇಡ…” “ಮಜ್ಜಿಗೆಯಾದರೂ ತೆಗೆದುಕೊಳ್ಳಿ” “ನಾಯಿಗೆ ಹೆದರುತ್ತೀರಾ? ಇಲ್ಲಾಂದ್ರೆ ‘ಗೋಪೀ’ನ ಇಲ್ಲಿಗೇ ಕರೆಸಿಕೊಳ್ಳುತ್ತೇನೆ’ ಹೀಗೆ ಪ್ರಾರಂಭವಾದ , ನಮ್ಮ ಮಾತುಕತೆಯನ್ನು ನಿರಾಳವಾಗಿ ಮುಗಿಸಿ ಹೊರಬಂದಾಗ ಅರ್ಧ ಗಂಟೆ ಮೀರಿತ್ತು. “ದೊಡ್ಡವರ ಭೇಟಿ, ಹೇಗೆ ನಡೆದುಕೊಂಡರೆ ಹೇಗೋ ಏನೋ ಎಂಬ ಅಳುಕು ಅದಾಗಲೇ ಮಾಯವಾಗಿ ಹೋಗಿತ್ತು. ಅಲ್ಲಿದ್ದಷ್ಟು ಹೊತ್ತೂ ಒಂದೇ ಒಂದು ನಿಮಿಷ ಅವರ ಸ್ಥಾನಮಾನದ ಅರಿವು ಮೂಡದಂತೆ, ಎಷ್ಟೋ ವರ್ಷಗಳ ಪರಿಚಯವಿದ್ದವರ […]
