ಆಧ್ಯಾತ್ಮ ಎಂದರೇನು? ಭಾರತದಲ್ಲಿ ತತ್ತ್ವಶಾಸ್ತ್ರವನ್ನು ಎತ್ತಿ ಹಿಡಿದುದು ಜ್ಞಾನಕ್ಕಾಗಿ ಅಲ್ಲ. ಮನುಷ್ಯ ಈ ಬದುಕಿನಲ್ಲಿ ಸಾಧಿಸಬಹುದಾದ ಅತ್ಯುನ್ನತ ಗುರಿಯನ್ನು ತಲುಪುವುದಕ್ಕಾಗಿ. ಇಲ್ಲಿ ತತ್ತ್ವಶಾಸ್ತ್ರವು ಆಶ್ಚರ್ಯ, ಕುತೂಹಲಗಳಿಂದಾಗಿ ರೂಪುಗೊಂಡಿಲ್ಲ, ಬದಲಿಗೆ ಅದು ರೂಪುಗೊಂಡಿರುವುದು ಬದುಕನ್ನು ಸುಂದರಗೊಳಿಸಿಕೊಳ್ಳುವುದಕ್ಕಾಗಿ. ಇಲ್ಲಿ ತತ್ತ್ವಾನುಸಂಧಾನವು ಕೇವಲ ಬೌದ್ಧಿಕ ಜಿಜ್ಞಾಸೆ ಅಲ್ಲ. ಅದು ಕೇವಲ ಆಚರಣೆ ಪ್ರಧಾನವಾದ ನೈತಿಕತೆಯೂ ಅಲ್ಲ. ಭಾರತೀಯ ಚಿಂತಕರ ಮನಸ್ಸನ್ನು ಕಲಕಿದುದು ಬದುಕಿನ ಇತಿಮಿತಿಗಳೇ. ಇವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದೇ ಅವರ ಮುಖ್ಯ ಕಾಳಜಿ. ನಮ್ಮ ತತ್ವಶಾಸ್ತ್ರದ ಆಧಾರವೇ ಆಧ್ಯಾತ್ಮ. ಆಧ್ಯಾತ್ಮ ಎಂದರೇನು? […]
