ಅಕ್ಕಮಹಾದೇವಿ ನಿನ್ನಂತರಂಗವ ಬಿಚ್ಚಿಡುತಾ ಚೆನ್ನಮಲ್ಲಿಕಾರ್ಜುನನ ಮೆಚ್ಚಿಸುತಾ ಬೆತ್ತಲಾದೆ ಬೆಳ್ಳಬೆಳಗಿನಲಿ ವೈರಾಗ್ಯದ ಪ್ರತಿರೂಪದಲಿ ಭಕ್ತಿ ಪ್ರೇಮದ ಸಾಂಗತ್ಯದಲಿ ತೊರೆದ ರಾಜ ಕೌಶಿಕನ ಸಿರಿವೈಭವದ ಸಡಗರವ ಅಂಜಿಕಿಲ್ಲ ಅಳುಕಿಲ್ಲ ಯಾರ ಹಂಗೂ ನಿನಗಿಲ್ಲ ಕಾರ್ಮೋಡಗಳ ಮರೆಯಲ್ಲಿ ಸೂರ್ಯರಷ್ಮಿ ತಾ ಅವಿತಂತೆ ಜಗಕಾವರಿಸಿದ ಮೋಹ ನಿನ್ನಲ್ಲಿ ಸುಳಿಯದೆ ನೀ ತೊಳೆದ ಚಿನ್ನವಾದೆ ಭಾವಭಾವಕ್ಕೂ ಬೆರಗಾದೆ ಮನದಾಳದಿ ಭಕ್ತಿ ಒಸಗಿಸುತ ಅಂತರಾತ್ಮವ ಕಾಣುತ ಕಲ್ಯಾಣದಿ ನೆರೆದಿಹಸಂತರ ನಿಬ್ಬೆರಗಾಗಿಸಿದೆ ಅಕ್ಕ ವೈರಾಗ್ಯ ಪ್ರತಿರೂಪ ನೀನಾದೆ ಭೋಗ ಸರಿಸಿ ಭಾಗ್ಯವಂತೆ ನೀನಾದೆ ಭಗವಂತನಾನಂದ ನಿನ್ನ ವಚನದಿ […]
