ಅಮ್ಮ’ ನಂಥ ಒಬ್ಬ ತಮ್ಮನಿದ್ದ’ (ಮೂರು ದಿನ… ನೂರು ನೆನಪು…) ಹೆಸರು ಸುಧೀಂದ್ರ. ನನಗಿಂತ ಏಳು ವರ್ಷಗಳಷ್ಟು ಕಿರಿಯ ವಯಸ್ಸಿನಲ್ಲಿ. ಹದಿನಾಲ್ಕು ವರ್ಷ ‘ಹಿರಿಯ’ ಮನಸ್ಸಿನ ಪಕ್ವತೆಯಲ್ಲಿ. ಹೃದಯದಿಂದ ಮಗು, ಸಹಾಯಕ್ಕೆ ನಿಂತರೆ ‘ಸೇವಕ’. ಸಲಹೆಗಳನ್ನು ಕೊಡುವಲ್ಲಿ ಮಂತ್ರಿ. ಸೋದರ, ಸಹೋದರಿಯರಿಗೆ ಅಭಯಹಸ್ತ. ಗೆಳೆಯರಿಗೆ ಆಪ್ತಮಿತ್ರ. ಇದು ಅಕ್ಕನೆಂಬ ಅಕ್ಕರೆಯಿಂದ ಬಂದ ಅತಿಶಯೋಕ್ತಿಯಲ್ಲ. ಅವನಿದ್ದುದೇ ಹಾಗೆ. ಅಣ್ಣ ಕಟ್ಟಿದ ಕಾಲೇಜನ್ನು ತನ್ನ ಸ್ವಂತ ಮಕ್ಕಳಂತೆ ಬೆಳೆಸಿ ಅಣ್ಣನ ಬಲಗೈ ಬಂಟನಾದ. ನನ್ನ ಮೊದಲ ಪುಸ್ತಕ ‘ನೀರ ಮೇಲೆ […]
