ಡಬ್ಬಿಂಗ್ ಅನ್ನುವುದೀಗ ಅನಿವಾರ್ಯ ವಾಸ್ತವ. ಅದು ಬೇಡ ಅನ್ನುವುದು, ಅಯ್ಯೊ ಡಬ್ಬಿಂಗಿನಿಂದ ಅನಾಹುತವಾಗಿಬಿಡುತ್ತದೆ ಅಂತ ಹೌಹಾರುವುದು, ಎರಡೂ ನಿರರ್ಥಕ. ಹಾಗಾಗಿ, ಡಬ್ಬಿಂಗಿನ ವಾಸ್ತವಕ್ಕೆ ತೆರೆದುಕೊಳ್ಳುತ್ತಾ ಅದನ್ನು ಹೇಗೆ ಭಾಷೆಯ ಬೆಳವಣಿಗೆಗೆ ಮತ್ತು ಒಟ್ಟಾರೆ ದೃಶ್ಯಮಾಧ್ಯಮದ ಗುಣಮಟ್ಟ ಸುಧಾರಣೆಗೆ ದುಡಿಸಿಕೊಳ್ಳಬಹುದು, ಮತ್ತು ಅದಕ್ಕಿರುವ ಸವಾಲುಗಳೇನು ಅನ್ನುವುದರ ಬಗ್ಗೆ ಚಿಂತಿಸುವುದು ಒಳ್ಳೆಯದು. ಆ ದಿಕ್ಕಿನಲ್ಲಿ ಒಂದು ಪ್ರಯತ್ನ ಇದು. ಆದಷ್ಟೂ ಸಂವಾದದ ರೀತಿಯಲ್ಲಿರಬೇಕು ಅನ್ನುವುದು ಆಶಯ; ಹಾಗಾಗಿ ಇಲ್ಲಿ ಮೊದಲು ಮಾತಾಡುವುದು ಅನಂತ ಚಿನಿವಾರ್ ಅವರೇ ಆದರೂ, ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಲು ಮುಂದೆ ಬಂದು, ಡಬ್ಬಿಂಗಿನ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾದರೆ ಮಾತುಕತೆ ಅರ್ಥಪೂರ್ಣವಾಗುತ್ತದೆ…
ನಮ್ಮೊಡನೆ: ಶ್ರೀ ಅನಂತ ಚಿನಿವಾರ