ಆಂತರ್ಯದ ಸಾಧನೆ ಮಹಿಳೆಗೆ ಪೋಷಣೆ ಸ್ಫರ್ಧೆ ಅನ್ನೋದು ಎಲ್ಲರಿಗೂ ಬೇಕು. ಆ ಸ್ಫರ್ಧೆ ಆರೋಗ್ಯಯುತವಾಗಿರಬೇಕು ಹಿತಕಾರಿಯಾಗಿರಬೇಕು ಮತ್ತು ಎಲ್ಲರಿಗೂ ಪ್ರೋತ್ಸಾಹಕಾರಿಯಾಗಿರಬೇಕು. ಇದರಿಂದ ಪ್ರತಿಯೊಬ್ಬ ಮಹಿಳೆ ತನ್ನ ಸಾಧನೆಯನ್ನು ಪ್ರದರ್ಶಿಸಬಲ್ಲಳು. ಮಹಿಳೆ ಪ್ರಭುದ್ಧಳು, ಎಲ್ಲ ಸಮಸ್ಯೆಗಳನ್ನು ತನ್ನ ಚಾಕಚಕ್ಯತೆಯಿಂದ ನಿಭಾಯಿಸುವ ಜಾಣ್ಮೆಯನ್ನು ಹೊಂದಿದವಳು. ಮನೆಯವರ ಸಹಕಾರದಿಂದಲೇ ಪ್ರತಿಯೊಂದರಲ್ಲಿ ಯಶಸ್ಸನ್ನು ಸಾಧಿಸಬಲ್ಲಳು. ಅವಳು ಸಶಕ್ತಳು. ಮುಖ್ಯವಾಗಿ ಅವಳಲ್ಲಿಯ ಪ್ರತಿಭೆಯನ್ನು ಗುರುತಿಸಿ ಮಾನ್ಯತೆ ನೀಡಬೇಕಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ ೮ರಂದು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷ […]
