ಅನುವಾದ ಸಾಹಿತ್ಯ ಭಾಗ-೨ ಮೊದ ಮೊದಲು ಸಣ್ಣ ಪುಟ್ಟ ಲೇಖನಗಳು… ನಂತರ ಕವನಗಳು… ಸ್ವರಚಿತ ಕಥೆಗಳು.. ವಿಜಯಪುರದಿಂದ ಧಾರವಾಡಕ್ಕೆ ಬಂದನಂತರ ನನ್ನ ಗೆಳತಿಯರ ಬಳಗ ಬೆಳೆದಿತ್ತು. ಶುಭದಾ ಅಮಿನಭಾವಿ ಎಂಬ ಹೆಸರಾಂತ ಅನುವಾದಕಿ ನನ್ನ ಆತ್ಮೀಯ ಗೆಳತಿಯಾಗಿ ದೊರಕಿದ್ದಳು. ಅವಳು ಹಿಂದಿ, ಇಂಗ್ಲಿಷ್ ಹಾಗೂ ಮರಾಠಿ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡಿದವಳು. ಭೀಮಸೇನವನ್ನು ಅನುವಾದ ಮಾಡಿದ ಖ್ಯಾತಿ ಅವಳದು. ಆಕೆ ಪ್ರಿಯಾಂಕಾ ಪತ್ರಿಕೆಯಲ್ಲಿ ಬೆನಕ ಅನುವಾದಿತ ಕಥಾಸ್ಪರ್ಧೆಯಲ್ಲಿ ಎರಡು, ಮೂರು ಬಾರಿ ಪ್ರಶಸ್ತಿ ಪಡೆದಿದ್ದಳು. ನಿಜ ಹೇಳಬೇಕೆಂದರೆ […]
