ಅನುವಾದ ಸಾಹಿತ್ಯ ಭಾಗ ೩ ಭಾಷಾವೈಶಿಷ್ಟ್ಯಗಳ ಬಳಕೆಯ ಅಪರೂಪದ, ಆಡುಭಾಷೆಯ ನುಡಿಗಟ್ಟುಗಳು ಒಂದು ರೀತಿಯಲ್ಲಿ ಭಾಷೆಯಿಂದ ಬೇರ್ಪಡಿಸಲಾಗದ ಅಭಿವ್ಯಕ್ತಿಗಳಾಗಿವೆ. ಅವುಗಳು ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿರುತ್ತವೆ, ಅವುಗಳಲ್ಲಿ ಒಳಗೊಂಡಿರುವ ಅಂಶಗಳಿಂದ ಸ್ವತಂತ್ರವಾಗಿರುತ್ತವೆ. ಒಮ್ಮೊಮ್ಮೆ ಈ ನುಡಿಗಟ್ಟುಗಳು ಶಬ್ದಶಃ ಅನುವಾದ ಹೊಂದಿದಾಗ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ನನಗೆ ಶ್ರೀಮತಿ ಇಂದ್ರಾಯಣಿ ಸಾಹುಕಾರರವರ ಮೇನಕಾ ಹಾಗೂ ಏಕ್ ಹೋತಾ ಸಿಕಂದರ ಕಾದಂಬರಿಗಳನ್ನು ಅನುವಾದ ಮಾಡುವಾಗ ಕೆಲವು ನುಡಿಗಟ್ಟುಗಳನ್ನು ಹೇಗೆ ಅರ್ಥ ಕೆಡದಂತೆ ಅನುವಾದಿಸಬೇಕೆಂಬ ಸಮಸ್ಯೆ ಉಂಟಾಗಿತ್ತು.. ‘ಸೋನ್ಯಾ ಪೇಕ್ಷಾ ಪಿವಳಾ’.. ಬಹಳ […]
