Need help? Call +91 9535015489

📖 Print books shipping available only in India. ✈ Flat rate shipping

ಡಾ. ಅರ್ಚನಾ ಕುಲಕರ್ಣಿ ಅವರಿಂದ ಪುರಂದರ ದಾಸರ ಸಂಗೀತ ಕಾರ್ಯಕ್ರಮ

ಕಂಚಿನ ಕಂಠದ ಡಾ. ಅರ್ಚನಾ ಕುಲಕರ್ಣಿ ಅವರಿಂದ ಪುರಂದರ ದಾಸರ ಸಂಗೀತ ಕಾರ್ಯಕ್ರಮ

ಹಿಂದೂಸ್ತಾನಿ ಮತ್ತು ಸುಗಮ ಸಂಗೀತ ಕಲಾವಿದೆ ಡಾ ಅರ್ಚನಾ ಕುಲಕರ್ಣಿ ಅವರು ಸಂಗೀತ ಕಲಿತಿದ್ದು ಶ್ರೀ. ಸ್ವಾಮಿ ಚಂದ್ರಶೇಖರ್ ಪುರಾಣಿಕ್ಮಠ್, ಶ್ರೀ. ಪಿ ಬಿ ಶ್ರೀನಿವಾಸ್ ಮತ್ತು ಇತರ ಸಂಗೀತ ಕಲಾವಿದರಿಂದ. ಇವರು ಆಲ್ ಇಂಡಿಯಾ ರೇಡಿಯೋ “A” ದರ್ಜೆಯ ಗಾಯಕಿ. ಡಾ. ಎಸ್ ಪಿ ಬಾಲಸುಬ್ರಮಣ್ಯಂ ಇವರನ್ನು “ಎದೆ ತುಂಬಿ ಹಾಡಿದೆನು” ಕಾರ್ಯಕ್ರಮದ ಮೊದಲ ಕೆಲವು ಕಂತಿನಲ್ಲಿ ಹಾಡಲು ಆಯ್ಕೆ ಮಾಡಿದ್ದರು. ಇವರ ಕಂಚಿನ ಕಂಠವನ್ನು ಖ್ಯಾತ ಗಾಯಕಿ ಎಸ್ ಜಾನಕೀ ಅವರ ಧ್ವನಿಗೆ ಹೋಲಿಸಿದ್ದಾರೆ. ಆಲಮ ಪ್ರಭು ಸುಪ್ರಭಾತ, TTD ನಾದ ನಿರಂಜನಮ್, ಮೈಸೂರು ದಸರಾ ಮುಂತಾದ ಕಾರ್ಯಕ್ರಮದಲ್ಲಿ ಸಂಗೀತ ಪ್ರದರ್ಶನ ನೀಡಿದ್ದಾರೆ. “ಸಂಗೀತ ವಿಶಾರದ”, “ವಸಿಷ್ಠಧಾಮ ಸಂಗೀತ ರತ್ನ” ಮುಂತಾದ ಪ್ರಶಸ್ತಿಗಳು ಇವರಿಗೆ ದೊರಕಿವೆ.

ಡಾ. ಸುವರ್ಣ ಮೋಹನ್ ಮತ್ತು ತಂಡ- ಪುರಂದರ ದಾಸರ ಹಾಡುಗಳ ಸುಮಧುರ ಕಾರ್ಯಕ್ರಮ

ಡಾ. ಸುವರ್ಣ ಮೋಹನ್ ಮತ್ತು ತಂಡದವರು ಪುರಂದರ ದಾಸರ ಹಾಡುಗಳ ಸುಮಧುರ ಕಾರ್ಯಕ್ರಮ

ಡಾ. ಸುವರ್ಣ ಮೋಹನ್ ಕಲಾವಿದರ ಕುಟುಂಬದಿಂದ ಬಂದವರು. ಅವರ ತಂದೆ ಶ್ರೀ ನಂಜುಂಡಯ್ಯ ರಂಗಭೂಮಿ ಮತ್ತು ಹಾರ್ಮೋನಿಯಂ ಕಲಾವಿದರು, ತಾಯಿ ಶ್ರೀಮತಿ. ವಿನೋದಮ್ಮ ಹಿರಿಯ ಶಾಸ್ತ್ರೀಯ ಸಂಗೀತ ಗಾಯಕರು. ಸುಗಮ ಸಂಗೀತ ಕಲಿತಿದ್ದು ಪ್ರಖ್ಯಾತ ಗಾಯಕರಾದ ಶ್ರೀ. ಎಚ್ ಕೆ ನಾರಾಯಣ, ಶ್ರೀ. ಗೀತಪ್ರಿಯ ಮತ್ತು ಶ್ರೀ, ರಾಜಾರಾಮ್ ಅವರಿಂದ. ಕೆಂಪೇಗೌಡ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ ಮತ್ತು ಹಲವಾರು ಪ್ರಶಸ್ತಿ ಇವರಿಗೆ ದೊರೆತಿವೆ. ಕಳೆದ ೨೨ ವರ್ಷಗಳಿಂದ ದಾಸ ಸಾಹಿತ್ಯದಲ್ಲಿ ಇವರ ಮತ್ತು ಇವರ ಕುಟುಂಬದವರ ಸೇವೆ ಅಪಾರ.
ಶ್ರೀ ಪುರಂದರ ಇಂಟರ್ನ್ಯಾಷನಲ್ ಟ್ರಸ್ಟ್  ಇಂದ ಡಾ. ಸುವರ್ಣ ಮೋಹನ್ ಮತ್ತು ತಂಡದವರು ಪುರಂದರ ದಾಸರ ಹಾಡುಗಳ ಸುಮಧುರ ಕಾರ್ಯಕ್ರಮ ಕೊಡುತ್ತಿದ್ದಾರೆ.

ಡಾ. ಭಾಗ್ಯ ಮೂರ್ತಿ ಮತ್ತು ಸಿಂಗಾಪುರ್ ಸಂಗೀತಗಾರರಿಂದ ಪುರಂದರ ದಾಸರ ಗೀತೆಗಳು

ಡಾ. ಭಾಗ್ಯ ಮೂರ್ತಿ, ಅವರ ಶಿಷ್ಯ ವೃಂದ “ಅಷ್ಟಲಕ್ಷ್ಮೀ” ತಂಡ ಮತ್ತು ಸಿಂಗಾಪುರ್ ಸಂಗೀತಗಾರರಿಂದ ಪುರಂದರ ದಾಸರ ಗೀತೆಗಳು

ವಿಧುಷಿ ಡಾ. ಭಾಗ್ಯ ಮೂರ್ತಿ ಅವರು ಸಂಗೀತದ ಕುಟುಂಬದಿಂದ ಬಂದವರು, ಕರ್ನಾಟಕ ಶಾಸ್ತ್ರೀಯ ಸಂಗೀತ ಹೆಸರಾಂತ ಸಂಗೀತ ಗುರುಗಳಾದ ಶ್ರೀ ಎಂ ಪ್ರಭಾಕರ್ ಅವರಿಂದ ಕಲಿತಿದ್ದಾರೆ. ಆಲ್ ಇಂಡಿಯಾ ರೇಡಿಯೋ ಕಲಾವಿದೆಯಾಗಿ ಕೂಡ ಕಾರ್ಯಕ್ರಮ ಕೊಟ್ಟಿದ್ದಾರೆ. ನಂತರ ಶ್ರೀ ಕಾರೈಕುಡಿ ಕೃಷ್ಣ ಮೂರ್ತಿ ಅವರು ಪ್ರೋತ್ಸಾಹ ನೀಡಿ ಸಿಂಗಾಪುರ್ ಸಮುದಾಯಕ್ಕೆ ಪರಿಚಯಿಸಿದರು.
ಸಿಂಗಾಪುರ್ ನಲ್ಲಿ ಸಂಗೀತ ಪಯಣ ಮುಂದುವರೆಸಿದ್ದಾರೆ. ಶಾಸ್ತ್ರೀಯ, ಅರೆ-ಶಾಸ್ತ್ರೀಯ ಮತ್ತು ಸುಗಮ ಸಂಗೀತ ಬಹುಮುಖ ಪ್ರತಿಭೆಯ ಡಾ. ಭಾಗ್ಯ ಮೂರ್ತಿ ಭಾರತ, ಸಿಂಗಾಪುರ್, ಮಲೇಶಿಯಾ, ಆಸ್ಟ್ರೇಲಿಯಾ, ಹಾಂಗ್ ಕಾಂಗ್, ಚೀನಾ, ಜಪಾನ್ , ಕಾಂಬೋಡಿಯಾ , ಯು ಕೆ ಮತ್ತು ಯು ಎಸ್ ಎ ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ‘ಗೀತಾ ಕಲಾ ನಿಪುಣ’, ‘ಗಾನ ಕೋಗಿಲೆ’, ‘ಸಂಗೀತ ಸರಸ್ವತಿ‘ ಡಾ.ಭಾಗ್ಯ ಮೂರ್ತಿ ಅವರಿಗೆ ಸಂದ ಪ್ರಶಸ್ತಿಗಳಲ್ಲಿ ಕೆಲವು.
ಕಾರ್ಯಕ್ರಮದಲ್ಲಿ ಪುರಂದರ ದಾಸರ ಹಾಡುಗಳನ್ನು ಪ್ರಸ್ತುತ ಪಡಿಸುತ್ತಿರುವವರು ಡಾ.ಭಾಗ್ಯ ಮೂರ್ತಿ , ಅವರ ಶಿಷ್ಯ ವೃಂದ “ಅಷ್ಟಲಕ್ಷ್ಮೀ” ತಂಡ ಮತ್ತು ಸಿಂಗಾಪುರ್ ದೇಶದಲ್ಲಿ ನೆಲೆಸಿರುವ ಪ್ರತಿಭಾನ್ವಿತ ಸಂಗೀತಗಾರರಾದ ರಾಧಾ ನಾರಾಯಣನ್, ರಾಜಿ ಮಹೇಶ್, ಶೋಭಾ ರಘು, ಶ್ರುತಿ ಆನಂದ್, ಶ್ರುತಿ ರಾಜ್, ಶ್ರೀವಿದ್ಯಾ ಶ್ರೀರಾಂ, ವೈಷ್ಣವಿ ಆನಂದ್
ವಿಡಿಯೋ ಒಂದುಗೂಡಿಸಿ, ಎಡಿಟ್ ಮಾಡಿದ್ದು
ಸುಮನಾ ಹೆಬ್ಬಾರ್

ವಿಧುಷಿ ಪುಷ್ಪಾ ಜಗದೀಶ್ ಮತ್ತು ಆಸ್ಟ್ರೇಲಿಯಾದ ಗಾಯಕರಿಂದ ಪುರಂದರ ಸಂಗೀತ.

ವಿಧುಷಿ ಪುಷ್ಪಾ ಜಗದೀಶ್ ಮತ್ತು ಆಸ್ಟ್ರೇಲಿಯಾದ ಪ್ರತಿಭಾವಂತ ಗಾಯಕರಿಂದ ಪುರಂದರ ಸಂಗೀತ.

ವಿಧುಷಿ ಪುಷ್ಪಾ ಜಗದೀಶ್ ಅವರು ಒಳ್ಳೆಯ ಸುಗಮಸಂಗೀತ ಕಲಾವಿದೆ. ಇವರ ಭಾವಪೂರ್ಣ ಗಾಯನವೇ ಇವರ ಪರಿಚಯ.
ಆಸ್ಥಾನ ವಿದ್ವಾನ್ ಶ್ರೀ ಎಲ್ ರಾಜಾ ರಾವ್ ಅವರಿಂದ ಶಾಸ್ತ್ರೀಯ ಸಂಗೀತ, ಮೈಸೂರ್ ಅನಂತಸ್ವಾಮಿ ಅವರ ಬಳಿ ಭಾವಗೀತೆ ಶಿಕ್ಷಣ ಪಡೆದಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಇವರು ಅನೇಕ ಕಾರ್ಯಕ್ರಮ ಕೊಟ್ಟಿದ್ದಾರೆ, ಕನ್ನಡ ಅಲ್ಲದೆ ಹಿಂದಿ ಭಾಷೆಯ ಗೀತೆಗಳು ಭಜನ್ ಉತ್ಯಾದಿಗಳನ್ನು ಪ್ರಸ್ತುತ ಪಡಿಸಿ ಜನಪ್ರಿಯತೆ ಹೊಂದಿದ್ದಾರೆ.
ಶ್ರೀ ಚಿನ್ಮಯ ಮಿಷನ್ನಿನ ಸ್ವಾಮಿ ಸ್ವರೂಪಾನಂದ ಅವರ ರಾಮಾಯಣ ಪ್ರವಚನಗಳಿಗೆ ಹಾಡನ್ನು ಹಾಡಿದ್ದು , ಖ್ಯಾತ ಗಾಯಕ ಮನ್ನಾ ಡೇ ಅವರೊಂದಿಗೆ ಹಾಡಿದ್ದು ಮತ್ತು ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಿಡ್ನಿ (rally) ಕೂಟದಲ್ಲಿ ಹಾಡಿದ ಘಳಿಗೆ ಅವರಿಗೆ ಹೆಮ್ಮೆಯ ವಿಷಯವಾಗಿವೆ.
ಜಾಗತಿಕ ಪುರಂದರ ಉತ್ಸವದಲ್ಲಿ ವಿಧುಷಿ ಪುಷ್ಪಾ ಜಗದೀಶ್, ಸಿಡ್ನಿಯಲ್ಲಿ ನೆಲೆಸಿರುವ ಪ್ರತಿಭಾವಂತ ಗಾಯಕರು, ಅವರ ಶಿಷ್ಯವೃಂದ ಮತ್ತು ಸ್ನೇಹಿತರು. ಕಳೆದ ಇಪ್ಪತ್ತು ವರ್ಷದಿಂದ ಸಿಡ್ನಿಯಲ್ಲಿ ನಡೆಯುತ್ತಿರುವ ಪುರಂದರ ಆರಾಧನೆಯಲ್ಲಿ ಈ ಕಲಾವಿದರು ಸತತವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಮಕ್ಕಳು ಮತ್ತು ಯುವ ಪ್ರತಿಭೆಗಳಿಂದ ಹಾಡು, ನಾಟಕ

ದೇಶ ವಿದೇಶದ ಮಕ್ಕಳು ಮತ್ತು ಯುವ ಪ್ರತಿಭೆಗಳಿಂದ ಪುರಂದರ ದಾಸರ ಹಾಡುಗಳು, ನಾಟಕ

ನಾಟಕ – ದಾಸರೆಂದರೆ ಪುರಂದರ ದಾಸರಯ್ಯ,
ಗಿಳಿವಿಂಡು ತಂಡದ ಪಾತ್ರ ಪರಿಚಯ:
ಕೃಷ್ಣ – ನಿನಾದ್ ಲಕ್ಕುಂಡಿ,
ಪುರಂದರದಾಸರು – ಅಕ್ಷತಾ ಲಕ್ಕುಂಡಿ,
ಪುರಂದರದಾಸರು – ವಿದುಲಾ ನಟರಾಜನ್,
ಸರಸ್ವತಿಬಾಯಿ – ಚಿನ್ಮಯಿ ಲಕ್ಕುಂಡಿ,
ಬ್ರಾಹ್ಮಣ – ಸುರಭಿ ಪುರೋಹಿತ,
ಆಳು – ಸಂಪದಾ ಪುರೋಹಿತ,
ಗಾಯನ- ಸಂಧ್ಯಾಪ್ರಮೋದ್ ಹಾಗೂ ಸಂಪದಾ,
ನೃತ್ಯಸಂಯೋಜನೆ ಹಾಗೂ ವಸ್ತ್ರವಿನ್ಯಾಸ – ಸಂಧ್ಯಾ ಪುರೋಹಿತ,
ನಿದೇ೯ಶನ ಹಾಗೂ ನಿರೂಪಣೆ – ಗೌರಿ ಪ್ರಸನ್ನ,

ಪುರಂದರ ದಾಸರ ಹಾಡು:
ಅದಿತಿ ರಾಘವೇಂದ್ರನ್,
ಮೇಘನಾ ಬೊಗರಾಜು,
ಅದಿತಿ ಜಂಭ,
ಸಂಪದ ಪುರೋಹಿತ್,
ಅಭಿಜ್ಞಾ ಗೋಪಾಲಕೃಷ್ಣ

ಯು ಕೆ ತಂಡದಿಂದ ಪುರಂದರ ಸಂಗೀತ ಕಾರ್ಯಕ್ರಮ

ಯು ಕೆ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಿರಿ ತಂಡದ ಕನ್ನಡಿಗರಿಂದ ಪುರಂದರ ದಾಸರ ಹಾಡುಗಳ ಸಂಗೀತ ಸಂಭ್ರಮ, ಹಾಡುಗಳನ್ನು ಪ್ರಸ್ತುತ ಪಡಿಸುತ್ತಿರುವವರು

ಅಮಿತ ರವಿಕಿರಣ್,
ಸುಮನಾ ಧ್ರುವ,
ಪೂಜಾ ತಾಯೂರ್,
ಸ್ನೇಹ ತಾಯೂರ್,
ಸಂಧ್ಯಾ ಪ್ರಮೋದ,
ಅಂಜನಾ ಎಸ ಟಕ್ಕಳಕಿ,

ಕಾರ್ಯಕ್ರಮ ಪ್ರಸ್ತುತಿ ಮತ್ತು ವಿವರಣೆ – ಗೌರಿ ಪ್ರಸನ್ನ

ಪುರಂದರ ಉತ್ಸವದಲ್ಲಿ ಪಂಡಿತ್ ಶ್ರೀ. ಅನಂತ ಭಾಗವತ್

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಹಿಂದೂಸ್ತಾನಿ ಗಾಯಕರು ಆದ ಪಂಡಿತ್ ಶ್ರೀ. ಅನಂತ ಭಾಗವತ್ ರು ಕಿರಾಣಾ ಘರಾಣಾ ಪರಂಪರೆಯವರು.
ಇವರು ಎಂ ಎಸ್ ಐ ಎಲ್ ಮತ್ತು ಇತರ ಅನೇಕ ಧ್ವನಿ ಸುರಳಿಗಳಿಗೆ ಸಂಗೀತ- ಸಂಯೋಜನೆ – ಗಾಯನ ಮಾಡಿದ್ದಾರೆ. ಭಾರತೀಯ ಭಕ್ತಿಪೀಠ ಪ್ರಶಸ್ತಿ ಪುರಸ್ಕೃತ ಡಾ. ಶ್ರೀ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ದಾಸ ಪದಗಳಿಗೆ ೬೨ ರಾಗಗಳನ್ನು ಅಳವಡಿಸಿ, ಸಂಯೋಜಿಸಿ ವಿದ್ಯಾರ್ಥಿಗಳಿಂದ ಹಾಡಿಸಿದ ಹೆಗ್ಗಳಿಕೆ ಇವರದು.
ಇವರು ದೇಶದ ಪ್ರಮುಖ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ಕೊಟ್ಟಿದ್ದಾರೆ. ಇವರಿಗೆ “ಸಂಗೀತ ಕಲಾಶ್ವ”, “ಕನಕ ಪ್ರಭೆ”, “ಸಂಗೀತ ಸಾಧಕ” ಇಂತಹ ಹಲವು ಗರಿಮೆಗಳು ವಿವಿಧ ಸಂಸ್ಥೆಗಳಿಂದ ದೊರೆತಿವೆ.
ಇವರು ಪುರಂದರ ಉತ್ಸವದಲ್ಲಿ ಪುರಂದರ ವಿಠ್ಠಲರ ಗೀತೆಗಳನ್ನು ಪ್ರಸ್ತುತಗೊಳಿಸಲಿದ್ದಾರೆ.

ಪುರಂದರ ದಾಸರ ಸಂಗೀತ ಸುಧೆ – ಶ್ರೀಮತಿ. ಡಾ. ಜಯಶ್ರೀ ಅರವಿಂದ್ ಮತ್ತು ಶ್ರೀಮತಿ. ಶ್ರೀರಕ್ಷಾ ಪ್ರಿಯರಾಮ್

ಶ್ರೀಮತಿ. ಡಾ. ಜಯಶ್ರೀ ಅರವಿಂದ್ ಅವರ ಸಂಗೀತ ನಿರ್ದೇಶನದಲ್ಲಿ, ಶ್ರೀಮತಿ. ಶ್ರೀರಕ್ಷಾ ಪ್ರಿಯರಾಮ್ ಅವರ ಮಧುರ ಕಂಠದಲ್ಲಿ ಪುರಂದರ ದಾಸರ ಸಂಗೀತ ಸುಧೆ.
The musical program of Purandara Dasara songs – Direction by Smt. Dr. Jayashree Aravind and songs by Smt. Shriraksha Priyaram