ಅರ್ಥ ವೇದಾಂತದ ಪರಿಭಾಷೆಯಲ್ಲಿ ಪ್ರತಿಯೊಂದು ಜೀವಾತ್ಮವೂ ಸಹ ‘ಪುರುಷ’ ಎಂದೂ, ವಿಶೇಷ ಲೋಕಗಳಿಂದ ಕೂಡಿರುವ ಶಕ್ತಿಕ್ಷೇತ್ರವನ್ನು ‘ಪ್ರಕೃತಿ’ ಎಂದೂ ಎನ್ನುತ್ತೇವೆ. ಹೀಗೆ ಪುರುಷನು ‘ಆತ್ಮಕ್ಷೇತ್ರವಾಗಿ’ ಮತ್ತು ಪ್ರಕೃತಿಯು ‘ಶಕ್ತಿಕ್ಷೇತ್ರವಾಗಿ’ ಒಂದು ಶುದ್ಧಚೈತನ್ಯ ಅಥವಾ ಮಹಾಮೂಲಚೈತನ್ಯದಿಂದ ಹೊರಬಂದು ಎರಡಾಗಿ ವಿಭಜಿಸಲಾಗಿದೆ ಎನ್ನುವುದು ಸೃಷ್ಟಿಯ ರಚನಾ ಕಾರ್ಯಕ್ರಮದ ಮೂಲಸಂರಚನಾ ಸಿದ್ಧಾಂತ. ಒಂದು ಮೂಲಚೈತನ್ಯದಿಂದ ‘ಶಕ್ತಿಕ್ಷೇತ್ರವಾಗಿ’ ಹೊರಬಂದ ‘ಪ್ರಕೃತಿಶಕ್ತಿ’ಯು ಅನೇಕ ಆಯಾಮಗಳಲ್ಲಿನ ಅನೇಕ ಲೋಕಗಳಾಗಿ ಬದಲಾಗುತ್ತಹೋಗುತ್ತದೆ. ಹಾಗೆಯೇ, ಮೂಲಚೈತನ್ಯದಿಂದ ಒಂದು ‘ಆತ್ಮಕ್ಷೇತ್ರ’ವಾಗಿ ಹೊರಬಂದ ‘ಪುರುಷಶಕ್ತಿ’ ಅನೇಕಾನೇಕ ಅಂಶಾತ್ಮಗಳಾಗಿ ಬಿಡುಗಡೆಯಾಗಿ ಆಯಾ ಲೋಕಗಳಲ್ಲಿ […]
