ಅವಲಕ್ಕಿ ಮೊಸರು ಮತ್ತ ಸುಬ್ಬಣ್ಣ ಸುಬ್ಬಣ್ಣ ನಮ್ಮ ಕಥಾನಾಯಕ. ಆತ ಮನೆಗೆ ಬಂದರೆ, ಎದುರಲ್ಲಿ ಕಂಡರೆ “ಸು” ತೆಗೆದರೆ “ಬಣ್ಣ” “ಬ” ತೆಗೆದರೆ “ಸುಣ್ಣ” ಇವ ನಮ್ಮ ಸುಬ್ಬಣ್ಣ ಅಂತ ರಾಗವಾಗಿಯೇ ಹಾಡಿ ಸ್ವಾಗತಿಸುತ್ತಿದ್ದೆವು. ಇಂತಿಪ್ಪ ಸುಬ್ಭಣ್ಣನಿಗೋ, ಅವಲಕ್ಕಿ –ಮೊಸರು ತಿನ್ನುವುದೆಂದರೆ ಪಂಚಪ್ರಾಣ, ಅಮ್ಮನಲ್ಲಿ ಹುಸಿಕೋಪ ತೋರಿಯೋ, ಕುಂಟು ನೆಪ ಹೇಳಿಯೋ ದಿನಕ್ಕೊಮ್ಮೆಯಾದರೂ ಅವಲಕ್ಕಿ –ಮೊಸರು ತಿನ್ನದಿದ್ದರೆ ಏನೋ ಕಳಕೊಂಡ ಚಡಪಡಿಕೆ. ಕಾಲನುಕಾಲಕ್ಕೆ ತಾಂ ಅಂತ ಹೇಳುತ್ತಾರಲ್ಲ ಹಾಗೆ ಯಾರ್ಯಾರಿಗೋ ಎಲ್ಲೆಲ್ಲೋ ಲಕ್ಕು ಹೊಡೆದು ಮಂತ್ರಿ ಮಹಾಮಂತ್ರಿ […]
