ಭಗವದ್ಗೀತೆಯ ಸಾರಸರ್ವಸ್ವ ಭಾಗ- ೩ ಮಾನವ ಹಕ್ಕುಗಳು– ಅ) ಸ್ವಾಭಾವಿಕ ಮಾನವ ಹಕ್ಕುಗಳು– ಮಾನವೀಯವಾಗಿ ಬದುಕಲು ಬಯಸುವ ವ್ಯಕ್ತಿಗೆ ಯಾವ ಮಾನವ ಹಕ್ಕುಗಳಿವೆ ಎಂಬುದನ್ನು ಭಾರತೀಯ ಜಗತ್ತಿನಲ್ಲಿ ಒಂದು ಸಿದ್ಧಾಂತದಂತೆ ಮೊಟ್ಟ ಮೊದಲಿಗೆ ಪ್ರತಿಪಾದಿಸಿದುದು ಭಗವದ್ಗೀತೆಯೇ. ಅದು ವ್ಯಕ್ತಿಯನ್ನು ಹಲವು ಮಗ್ಗುಲುಗಳಲ್ಲಿ ಗಮನಿಸಿದೆ. ಅವನನ್ನು ದೇಹ ಭಾವದಿಂದ ಗಮನಿಸಿ ದೇಹ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುವುದು ವ್ಯಕ್ತಿಯ ಜವಾಬ್ದಾರಿ ಎಂದು ಹೇಳಿ ಆರೋಗ್ಯಯುತ ದೇಹವನ್ನು ಹೊಂದುವುದು ವ್ಯಕ್ತಿಯ ಮೂಲಭೂತ ಹಕ್ಕು ಎಂದು ಗೀತೆ ಗಮನಿಸುತ್ತದೆ. ಆರೋಗ್ಯಯುತ ದೇಹವನ್ನು ಹೇಗೆ […]
