ಭಗವದ್ಗೀತೆಯ ಸಾರಸರ್ವಸ್ವ ಭಾಗ-೪ ಭಗವದ್ಗೀತೆ ಮತ್ತು ಅಹಿಂಸೆ– ಅಹಿಂಸಾತ್ಮಕ ಬದುಕು– ಯುದ್ಧ ಬೇಡ, ಯುದ್ಧದಿಂದ ಆಗಬಾರದ ಅನರ್ಥಗಳ ಸರಮಾಲೆಯೇ ಹುಟ್ಟಿಕೊಳ್ಳುತ್ತದೆ ಎನ್ನುವ ವಾದದಿಂದ ಆರಂಭ ಆಗುವ ಭಗವದ್ಗೀತೆಯು ವ್ಯವಸ್ಥಿತವಾದ ಶಾಂತಿಯುತವಾದ ಬದುಕಿಗೂ, ಯುದ್ಧ ರಹಿತ ರಾಜಕೀಯ ವ್ಯವಸ್ಥೆಗೂ ಇರುವ ಸಂಬಂಧವನ್ನು ಮುಂದಿಟ್ಟು ಪ್ರತ್ಯೇಕತಾ ಮನೋಭಾವಗಳಿಂದ ಉಂಟಾಗುವ ರಾಜಕೀಯ ಹಾಗೂ ವೈಯಕ್ತಿಕ ನೆಲೆಯ ಮಾನಸಿಕ ಯುದ್ಧಗಳಿಂದ ಪಾರಾಗಿ ವ್ಯಕ್ತಿಯೇ ಅಂತಿಮವಾಗಿ ಪರಮಶಾಂತಿ ಆಗಿಬಿಡುವ ಗುರಿಯನ್ನು ವೈಭವೀಕರಿಸುತ್ತದೆ. ಪರಮಶಾಂತಿ ಎಂಬುದು ಕೇವಲ ಯುದ್ಧದ ನಿರಾಕರಣೆ ಮತ್ತು ಇರುವ ವ್ಯವಸ್ಥೆಯ ಮುಂದುವರಿಯುವಿಕೆ […]
