‘ಭಂಟ’ ಹಾಗಂದ್ರೆ! ಕನ್ನಡ ಶಬ್ದಕೋಶದಲ್ಲಿ ವಿವರಿಸುವ ವೀರನೂ ಅಲ್ಲ, ದಾಸನೂ ಅಲ್ಲ. ಮಲೆನಾಡಿನ ಅಡಿಕೆ ಕೃಷಿಕರಲ್ಲಿ ಕೇಳಿ ನೋಡಿ, ‘ಹೋಯ್…! ಓ… ಅದಾ ‘ಸ್ವಾಂಗೆ’ ಕಡಿಯದಾ..! (ಅಡಿಕೆ ಸೋಗೆಯಿಂದ ಹಾಳೆ ಬೇರೆ ಮಾಡೋ ಸಾಧನ) ಎನ್ನುವ ಉತ್ತರ ಬರುತ್ತದೆ. ಹೌದು, ‘ಟ್ರೈಪಾಡ್’ನಂತೆ ಕಾಣುವ ಈ ವಸ್ತುವಿನ ಹೆಸರು ‘ಭಂಟ’ ಅಡಿಕೆ ಮರದಿಂದ ಒಣಗಿ ಬೀಳುವ ಸೋಗೆಯಿಂದ ಹಾಳೆಗಳನ್ನು ಬೇರ್ಪಡಿಸಲು ಈ ಭಂಟ ಬೇಕೆ,ಬೇಕು. ಹಿಂದಿನ ಕಾಲದಲ್ಲಿ ಮಲೆನಾಡು ಪ್ರದೇಶಗಳಲ್ಲಿ ಮನೆಯ ಮೇಲ್ಚಾವಣಿಗೆ ಹೊದಿಸಲು ಅಡಿಕೆ ಸೋಗೆ ಅತ್ಯಂತ […]
