ಬುದ್ಧ ಮತ್ತು ನಾನು! ಹಾ…ಇವತ್ತು ಬುದ್ಧನೊಟ್ಟಿಗೆ ಮಾತಿಗಿಳಿಯುವ ತವಕ ನನಗೆ…ಬುದ್ಧನಿಗೆ ನನ್ನ ಮನದ ಮಾತು ಹೇಳುವುದಿದೆ. ಬುದ್ಧ!… ಈಗಲ್ಲ ಚಿಕ್ಕವಳಿದ್ದಾಗಿನಿಂದ ನಿನ್ನ ಕುರಿತು ಕೇಳುತ್ತಿದ್ದೇನೆ. ಆಗ ನೀನು ಮುದ್ದಾದ ಗೊಂಬೆಯಂತೆ ಕಾಣುತ್ತಿದ್ದೆ. ನಿನ್ನೋಟ್ಟಿಗೆ ಆಟವಾಡಿ ಕಾಲ ಕಳೆಯುತ್ತಿದ್ದೆ. ಮುಂದೆ ಪಠ್ಯ ಪುಸ್ತಕಗಳಲ್ಲಿ ಓದಿದಾಗ ಓ…ಬುದ್ಧ ಸಾಮಾನ್ಯನಲ್ಲ ಏನೋ ಸಾಧನೆ ಮಾಡಿ, ಜ್ಞಾನ ಸಂಪಾದನೆ ಮಾಡಿರುವ ವ್ಯಕ್ತಿ ಎಂದು ತಿಳಿಯಿತು. ಮುಂದೆ ಬುದ್ಧನೆಂದಾಗ ಆಸೆ,ದುಃಖ,ಕರುಣೆ ಪ್ರೀತಿ,ಮೋಹ ಇನ್ನೂ ಹಲವಾರು ವಿಷಯಗಳು ತಿಳಿದುಕೊಂಡೆ. ಈಗ ಅರ್ಧ ಆಯಸ್ಸು ಕಳೆಯುವ ಹೊತ್ತಿಗೆ […]
