ಬುರುಡೆ ಬಿಂದಾಚಾರಿ ‘ಏನು, ಹುಡುಗೀ ಪಸಂದಾತೇನು?’ ಜಗುಲಿಯಿಂದಲೇ ಅಕ್ಷರಶಃ ಒದರುತ್ತಾ ಬಂದ ಬಿಂದಾಚಾರಿ ಒಳಗೆ ಬರುತ್ತಲೇ, ‘ಛೇ, ಏನವಾ ಸೆಕೀ, ಒಂದಿಷ್ಟು ಥಣ್ಣಗಿಂದ ಏನರೇ ಕೊಡು,’ ಎನ್ನುತ್ತಾ ತಲೆಯ ಮೇಲಿನ ಟೋಪಿ ತೆಗೆದು ಬಾಜೂಕ ಒಗೆದ. ‘ಈಗ ಬಂದೆ’ ಎಂದೆನ್ನುತ್ತಾ ಒಳಗೆ ಬಂದು ಫ್ರಿಜ್ ನಲ್ಲಿಟ್ಟ ಜೂಸನ್ನು ಒಂದು ಗ್ಲಾಸಿನಲ್ಲಿ ಸುರುವಿ ತಂದು ಅವನ ಮುಂದಿಟ್ಟೆ. ಲಗುಬಗೆಯಿಂದ ತೆಗೆದುಕೊಂಡು ಗಟಗಟನೆ ಕುಡಿದು ಗ್ಲಾಸನ್ನು ಕೆಳಗಿಟ್ಟ. ‘ಹಾಂ ನಾ ಬಂದ ಕೂಡ್ಲೇ ಕೇಳಿದ್ದೇನಾತವಾ, ಹುಡುಗಿ ಪಸಂತಾತ.’ ‘ಶಿರೀಷ ಅಂತಾನ, […]
