ಚಹಾ ಆತೇನ್ರೀ? ನಮ್ಮ ಉತ್ತರ ಕರ್ನಾಟಕದ ಮಂದಿಗೆ ಮುಂಜಾನೆ ಎದ್ದಕೂಡಲೆ ಚಹಾ ಬೇಕಾಗತದ. ನಾವು ಸಾಮಾನ್ಯವಾಗಿ ಚಹಾ ಎನ್ನದೆ ಗಾಂವಠೀ ಭಾಷಾದಾಗ ಛಾ ಅಂತೇವಿ. ನಾವು ಸಣ್ಣವರಿದ್ದಾಗ “ಹಲ್ಲು, ಮಾರಿ ಮುಗಿಸ್ಕೊಂಡ ಬಾ. ಬಿಸಿ ಬಿಸಿ ಛಾ ಕುಡೀವಂತಿ” ಎಂದು ಅವ್ವ ಕರೆದಾಗಲೇ ನಾವು ಮುಸುಕು ತೆಗೆಯುತ್ತಿದ್ದವು. ಅವ್ವನು ತನ್ನ ಕೈಯಾರೆ ಇದ್ದಿಲೊಲೆಯ ಮೇಲೆ ಹಿತ್ತಾಳೆಯ ಪಾತ್ರೆಯಲ್ಲಿ ಮಾಡಿದ ಖಮ್ಮನೆಯ ಚಹಾ ಕುಡಿದೇ ಮುಂದಿನ ಕೆಲಸ! ಅಯ್ಯ, ಅದೇನ ಅವ್ವನ ಕೈಲೆ ಮಾಡಿದ ಛಾ ಬ್ಯಾರೆ ಥರಾ […]
