ಚೈತ್ರದ ಚಿತ್ತಾರ ಚೈತ್ರದ ಚಿಗುರಿನ ಮರೆಯಲಿ ಅವಿತೊಂದು ಹಕ್ಕಿ ಹಾಡು ಹೇಳುತಲಿ ಮನಕೆ ಎಂಥದೋ ಆನಂದ ಪ್ರಕೃತಿ ಸೌಂದರ್ಯದ ಆಹ್ಲಾದ. ಮುಗಿಲ ಮಾಳಿಗೆಯಲಿ ಬೆಳ್ಳಕ್ಕಿಗಳ ಸಾಲು ಭೂ ತಾಯಿಯ ಧೂಳು ಗೋವಿನ ಪಾಲು ಕೆಂಪಡರಿದ ಮುಗಿಲು ಎಲ್ಲೆಲ್ಲೂ ಹರಸೀತು ಚೆಲುವಿನ ಹೊನಲು. ಚೈತ್ರದ ಚಿತ್ತಾರದಿ ಹೊಸಚಿಗುರು ಮರದಿ ಇಣುಕೀತು ಸವಿನೆನಪು ಕಾಡೀತು ಮನದಿ ಒನಪು. ಕೋಗಿಲೆಯ ತಾರುಣ್ಯ ನವಿಲಿನಾ ಲಾವಣ್ಯ ಕಾಡಿನ ಗಂಧ ಅರಳಿದಾ ಹೂವಿನ ಸುಗಂಧ. ಸ್ವಚ್ಛಂದ ಗಗನ ಮೂಡಿಸಿದೆ ಅಲ್ಲಿ ತನ್ನಯ ನಯನ ಎಲ್ಲೆಲ್ಲೂ […]
