ಕಾಲೇಜಿನ ಕಾಲ ಸುವರ್ಣ ಕಾಲ ಕಾಲೇಜಿನ ನನೆಪು ಬಂದಾಗಲೆಲ್ಲ ಒಂಥರದ ನವಿರು ಭಾವನೆ ಮನಸ್ಸಿನಲ್ಲಿ ಮೂಡಿ ಮರೆಯಾಗುವುದು. ಕಾಲೇಜ ಲೈಫ್ ಎಂದರೆ ಗೋಲ್ಡನ್ ಲೈಫ್ ಎನ್ನುವುದು ಉತ್ಪ್ರೇಕ್ಷೆಯೇನಲ್ಲ. ಆ ವೇಳೆಯಲ್ಲಿ ಕಲಿಯುವಾಗ ಅಂಥ ಸೀರಿಯಸ್ಸಾಗಿರದಿದ್ದರೂ ಜೀವನದಲ್ಲಿ ಕಲಿಯಬೇಕಾಗುವ ಪಾಠ ಸಾಕಷ್ಟು ಸಿಕ್ಕುತ್ತವೆ. ಕೇವಲ ಪುಸ್ತಕದಿಂದ ಮಾತ್ರವೇನಲ್ಲ ಗೆಳತಿಯರ ನಡಾವಳಿ, ಮಾಸ್ತರರು, ಪರಿಸರ, ಮುಂತಾದವುಗಳು ನಮಗೊಂದೊಂದು ಪಾಠ ಕಲಿಸುತ್ತವೆ ಎಂದರೆ ಸುಳ್ಳೇನಲ್ಲ. ಹೊಸದಾಗಿ ಕಾಲೇಜು ಮೆಟ್ಟಿಲು ಹತ್ತಿದಾಗ ಎಂಥದೋ ಅಳುಕು. ಅಷ್ಟೇನೂ ದೊಡ್ಡ ಸಿಟಿಯಾಗಿರದ ನಮ್ಮೂರಿನ ಕಾಲೇಜಿಗೆ ನಡೆದುಕೊಂಡೇ […]
