Need help? Call +91 9535015489

📖 Print books shipping available only in India. ✈ Flat rate shipping

ಪ್ರಕೃತಿ ಹೆಣ್ಣು

ಪ್ರಕೃತಿ  ಹೆಣ್ಣು ಪ್ರಕೃತಿ ಮಾತೆಯೇ ಹೆಣ್ಣಾಗಿ ಬಂದಿಳಿದಿಹಳು ಈ ಇಹದಲಿ ಕಷ್ಟಕೋಟಲೆ ನಿಷ್ಠೂರ ಕಾಟಗಳಲೇ ಹಣ್ಣಾಗಿ ಸಣ್ಣಾಗಿ ಮನಮಿಡಿಯುತಿಹಳು ಬಿರುಸಿನಾ ಬೇಗುದಿಗೆ ಮನವ ತಲ್ಲಣಿಸಿ ಇನಿತು ಇನಿತಾಗಿ ತನ್ನ ತಾನೇ ಕರಗುತಿಹಳು ಕಾರುಣ್ಯದ ನೋಟಕೆ ಹಪಹಪಿಸಿ ಪ್ರೇಮದಾ ಸಿಂಚನಕೆ ಪರಿತಪಿಸಿ ತನ್ನೊಡಲ […]

ಅಕ್ಕಮಹಾದೇವಿ

ಅಕ್ಕಮಹಾದೇವಿ ನಿನ್ನಂತರಂಗವ ಬಿಚ್ಚಿಡುತಾ ಚೆನ್ನಮಲ್ಲಿಕಾರ್ಜುನನ ಮೆಚ್ಚಿಸುತಾ ಬೆತ್ತಲಾದೆ ಬೆಳ್ಳಬೆಳಗಿನಲಿ ವೈರಾಗ್ಯದ ಪ್ರತಿರೂಪದಲಿ ಭಕ್ತಿ ಪ್ರೇಮದ ಸಾಂಗತ್ಯದಲಿ ತೊರೆದ ರಾಜ ಕೌಶಿಕನ ಸಿರಿವೈಭವದ ಸಡಗರವ ಅಂಜಿಕಿಲ್ಲ ಅಳುಕಿಲ್ಲ ಯಾರ ಹಂಗೂ ನಿನಗಿಲ್ಲ ಕಾರ್ಮೋಡಗಳ ಮರೆಯಲ್ಲಿ ಸೂರ್ಯರಷ್ಮಿ ತಾ ಅವಿತಂತೆ ಜಗಕಾವರಿಸಿದ ಮೋಹ ನಿನ್ನಲ್ಲಿ […]

ದೀಪ

ದೀಪ ಕತ್ತಲೆಯ ಬೆತ್ತಲಾಗಿಸಿ ಕಿರುನಗೆಯ ಸೂಸಿ ತನ್ನಿರುವಿಕೆಯಾ ಮೆರೆಯುತಿದೆ ಹಣತೆಯ ದೀಪ ಸುತ್ತಲೂ ಬೆಳದಿಂಗಳ ಬೆಳಕು ಚೆಲ್ಲಿ ಲಾಸ್ಯವಾಡುತಿದೆ ಅಲ್ಲಿ ತಾನೇ ಕೊರಗೀ ಕರಗೀ ಬೆಳಕ ನೀಡಿ ಸಂಭ್ರಮಿಸುತಿದೆ ಮೇಣದಾ ದೀಪ ನಕ್ಷತ್ರ ಪುಂಜಗಳೂ ತಮ್ಮ ಪರಿಧಿಯಲಿ ಮಿಣುಮಿಣುಕ ಬೆಳಕ ಹರಡಿ […]

ಕಾವ್ಯಕನ್ನಿಕೆಯು ಮನ ಮೆತ್ತಿಹಳು

ಕಾವ್ಯಕನ್ನಿಕೆಯು ಮನ ಮೆತ್ತಿಹಳು ಕಾವ್ಯ ಕನ್ನಿಕೆಯು ಮನ ಮೆತ್ತಿಹಳು ಶ್ರಾವಣದ ಐಸಿರಿಯ ಕಂಡು ಚಿಗುರು ಹೂವ ಹಸಿರ ಅರಳಿಸಿ ಹೂವ ಗಂಧ ಸುಗಂಧ ಪಸರಿಸಿ ಭುವಿಯ ಚೆಲುವು ಇಮ್ಮಡಿಸಿ ಬಂದಿತಿದೋ ಶ್ರಾವಣಾ ಶ್ರಾವಣವು ಹೆಬ್ಬಾಗಿಲು ಹಬ್ಬಹರಿದಿನಗಳ ಸಾಲು ಸಾಲು ಬಿಟ್ಟೊಬಿಡದೇ ರಚ್ಚೆ […]

ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣ ಕನ್ನಡ ನಾಡಿನ ಕಲಿ ಗಡಿನಾಡಿನ ಹುಲಿ ಕೆಚ್ಚೆದೆಯದಿ ಗಂಡುಗಲಿ ನಮ್ಮ ಸಂಗೊಳ್ಳಿರಾಯಣ್ಣ ಮುಳುಗದ ಸೂರ್ಯನ ನಾಡಿನರಸರಿಗೆ ಸಿಂಹಸ್ವಪ್ನ ನೀನಾದೆ ಜಮೀನ್ದಾರಿ ಜನರ ಆರ್ಭಟದ ನೀ ಮುರಿದೆ ಭಾರತಾಂಬೆಯ ತನುಜ ನೀನು ಚೆನ್ನಮ್ಮನ ಅನುಜನಾದೆ ನೀನು ಆಕೆಯ ಹೆಜ್ಜೆಗಳಿಗೆ ನೆರಳಾಗಿ […]

ಶ್ರಾವಣ ಬಂತು

ಶ್ರಾವಣ ಬಂತು ಶ್ರಾವಣ ಬಂತು ಆನಂದ ತಂತು ಹಬ್ಬ ಹರಿದಿನಗಳ ಶುಭವೇಳೆ ತಂತು ಕಡಬು ಹೋಳಿಗೆ ಪಾಯಸಗಳ ಆಗರ ಮನೆ ಮನೆಯಲೂ ಆನಂದದ ಸಾಗರ ನೀಲಾಕಾಶ ಬದಲಾಯಿತು ಮೈಬಣ್ಣ ಕಪ್ಪಾಯಿತು ಕಪ್ಪು ಮೈಯ್ಯಲಿ ಮೇಘಗಳಾವೃತ ಗಿರಿಪರ್ವತಗಳಿಗೂ ಮುತ್ತನಿಕ್ಕುತ ಸುರಿಸುತಿಹ ಜಲಧಾರೆ ಭುವಿಗೆ […]

ಅಹಲ್ಯ

ಅಹಲ್ಯ ಕಾರ್ಗತ್ತಲಿನ ಮರೆಯಲಿ ಬೀಸುತಿಹ ಸುಳಿಗಾಳಿಯಲಿ ಗೌತಮನ ಶಾಪ ಶಿಲೆಯಾಗಿಸಿಹುದು ಬಿರುಬಿಸಿಲಿಗೂ ಮಳೆಗಾಳಿಗೂ ಕಡು ಚಳಿಗೂ ಅಲುಗಾಡದೆ ನಿಂತಲ್ಲೇ ನಿಂತಿಹಳು ತಾ ಮಾಡದ ಪಾಪಕೆ ಇಂದ್ರನ ಕುಟೀಲತೆಗೆ ಮನ ಮಿಡುಕುತಿಹಳು ರಾಮನ ಬರುವಿಗೆ ಇದಿರು ನೋಡುತ್ತಿರೆ ಯುಗಗಳೇ ಕಳೆದಿವೆ ಪ್ರತೀಕ್ಷೆ ಹುಸಿಯಾಗದೇ […]

ಚೈತ್ರದ ಚಿತ್ತಾರ

ಚೈತ್ರದ ಚಿತ್ತಾರ ಚೈತ್ರದ ಚಿಗುರಿನ ಮರೆಯಲಿ ಅವಿತೊಂದು ಹಕ್ಕಿ ಹಾಡು ಹೇಳುತಲಿ ಮನಕೆ ಎಂಥದೋ ಆನಂದ ಪ್ರಕೃತಿ ಸೌಂದರ್ಯದ ಆಹ್ಲಾದ. ಮುಗಿಲ ಮಾಳಿಗೆಯಲಿ ಬೆಳ್ಳಕ್ಕಿಗಳ ಸಾಲು ಭೂ ತಾಯಿಯ ಧೂಳು ಗೋವಿನ ಪಾಲು ಕೆಂಪಡರಿದ ಮುಗಿಲು ಎಲ್ಲೆಲ್ಲೂ ಹರಸೀತು ಚೆಲುವಿನ ಹೊನಲು. […]

ಮಾನವೀಯತೆಯ ಮೆರೆಯೋಣ

ಮಾನವೀಯತೆಯ ಮೆರೆಯೋಣ ಹುಣ್ಣಿಮೆಯ ಬೆಳ್ಳಬೆಳದಿಂಗಳಿನಲಿ ಸೂರ್ಯರಶ್ಮಿಯ ತುಣುಕೊಂದು ಮಾಯಾದೇವಿಯ ಮಡಿಲಲಿ ಬಂದಾಕ್ಷಣ ಯಾರಿಗರಿವಿತ್ತು ರಾಜನಾಗಿ ಮೆರೆಯಬೇಕಾದ ಹೊತ್ತು ಮಡಿಯುಟ್ಟು ವೈರಾಗ್ಯವೇ ಮೈಮೆತ್ತು ಕಾಡಲಿ ಅಡಿ ಇಡುವನೆಂದು ಜಗಕೆ ಶಾಂತಿಯ ಬೆಳಕಾಗುವನೆಂದು ದುಃಖವೆಂದರಿಯದ ಮನನೊಂದು ಶಾಂತಿಯನರಸುತ ನಡೆದ ವೀರ ಯಾಕಾಗಿ? ಯಾಕಾಗಿ? ತನ್ನಂತರಂಗದ […]