Need help? Call +91 9535015489

📖 Print books shipping available only in India. ✈ Flat rate shipping

ಕಾಲೇಜಿನ ಕಾಲ ಸುವರ್ಣ ಕಾಲ

ಕಾಲೇಜಿನ ಕಾಲ ಸುವರ್ಣ ಕಾಲ ಕಾಲೇಜಿನ ನನೆಪು ಬಂದಾಗಲೆಲ್ಲ ಒಂಥರದ ನವಿರು ಭಾವನೆ ಮನಸ್ಸಿನಲ್ಲಿ ಮೂಡಿ ಮರೆಯಾಗುವುದು. ಕಾಲೇಜ ಲೈಫ್ ಎಂದರೆ ಗೋಲ್ಡನ್ ಲೈಫ್ ಎನ್ನುವುದು ಉತ್ಪ್ರೇಕ್ಷೆಯೇನಲ್ಲ. ಆ ವೇಳೆಯಲ್ಲಿ ಕಲಿಯುವಾಗ ಅಂಥ ಸೀರಿಯಸ್ಸಾಗಿರದಿದ್ದರೂ ಜೀವನದಲ್ಲಿ ಕಲಿಯಬೇಕಾಗುವ ಪಾಠ ಸಾಕಷ್ಟು ಸಿಕ್ಕುತ್ತವೆ. […]

ಪ್ರಶಸ್ತಿ

ಪ್ರಶಸ್ತಿ ‘ಕಲರ್ಸ್’ ಟಿ.ವಿ. ಚಾನೆಲ್ ನಲ್ಲಿ ಬಿತ್ತರಗೊಳ್ಳುತ್ತಿರುವ ‘ಬಿಗ ಬಾಸ್’ನ್ನು ಅದೇಕ ಚಿತ್ತದಿಂದ ನೋಡುವುದರಲ್ಲಿ ತಲ್ಲೀನನಾಗಿದ್ದೆ. ಫೋನು ರಿಂಗಣಿಸಿತು. ಆನಂದಕ್ಕೆ ಸೂಜಿ ಚುಚ್ಚಿದ ಬಲೂನಿನಂತೆನಿಸಿತು. ಯಾವುದೇ ಒಂದು ನಮಗಿಷ್ಟವಾದ ಪ್ರೋಗ್ರ್ಯಾಂ ನೋಡುತ್ತಿರುವಾಗ ಅಡೆತಡೆಯಾದರೆ ಮನಸ್ಸಿಗೆ ಒಂಥರ ಪಿಚ್ಚೆನಿಸುತ್ತದೆ. ಬೇಸರದಿಂದಲೇ ಫೋನೆತ್ತಿದೆ. ಅತ್ತ […]

ಚಟವಂತರ ಕೂಟದ ಹರಟೆಗಳು

ಚಟವಂತರ ಕೂಟದ ಹರಟೆಗಳು ನಮ್ಮೂರ ಹೈದ, ನಡಮನೀ ನಾರ್ಯಾ ಯಾವಾಗ ಕೇಳಿದರೂ ಆತನ ಬಾಯಿಂದ ಉದುರುವ ಅಣಿ ಮುತ್ತುಗಳು, ನನಗ ಈಗ ಭಾಳ ಅಡಚಣೀ ಅದ ಎನ್ನುವುದೇ ಆಗುತ್ತಿತ್ತು. ಮದುವಿಗಿಂತ ಮೊದಲು ಒಂಥರಾ ಅಡಚಣಿ, ಮದುವೀ ಆದಮ್ಯಾಲೇ ಇನ್ನೊಂಥರ, ಒಟ್ಟ ಅಡಚಣೇ […]

ಹಾಗೇ ಸುಮ್ಮನೇ

ಹಾಗೇ ಸುಮ್ಮನೇ ಸ್ಕೂಟೀ ತೆಗೆದುಕೊಂಡ ಹೊಸದಾಗಿ ಲೈಸನ್ಸು ಮಾಡಿಸುವುದಿತ್ತು. ಆರ್.ಟಿ.ಓ. ಆಫೀಸಿಗೆ ಹೋದೆ. ಯಾರನ್ನು ಭೆಟ್ಟಿಯಾಗುವುದೆಂದು   ತಿಳಿಯದೆ ಅತ್ತಿತ್ತ ನೋಡುತ್ತ ನಿಂತಿದ್ದೆ. ಅಲ್ಲಿ RTO (ಲೋಕಲ್ ಹೆಡ್ ಆಫೀಸರ) ಅಂತ ಬರೆದ ಬೋರ್ಡು ಕಾಣಿಸಿತು. ಅಲ್ಲಿ ಹೋಗಿ ನಿಂತೆ. ‘ಕನ್ನಡಕ ಹಾಕಿದ […]

ಸವತೀ ಸಂಬಂಧ

ಸವತೀ ಸಂಬಂಧ! ಈಗ ಇಪ್ಪತ್ತು ವರ್ಷದ ಹಿಂದೆ ಕಾರು ಎಂದರೆ ಲಗ್ಜುರಿಯಸ್ ಎಂದೆನಿಸಿತ್ತು. ಎಲ್ಲಿಯಾದರೂ ಸ್ಥಿತಿವಂತರಾದ ಒಬ್ಬೊಬ್ಬರು ಖರೀದಿಸುತ್ತಿದ್ದರು. ಈಗಿನ ಮಾತು ಬಿಡಿ, ಪಲ್ಯ ಮಾರುವವನ ಹತ್ತಿರವೂ ಕಾರು ಇರಲೇಬೇಕು! ಬೇರೆ ಊರಿನಿಂದ ತರಲು ಹಾಗೂ ಬೇರೆ ಮಾರುಕಟ್ಟೆಗೆ ಕಳಿಸಲು. ಸರಿ, […]

ವಜ್ರದ ಕವಚ

ವಜ್ರದ ಕವಚ! ಸಂಧ್ಯಾ ಶೆಣೈ ನಮ್ಮ ಮನೆಗೆ ಹತ್ತಿರದವಳು. ಇಬ್ಬರೂ ಜೊತೆಯಾಗಿಯೇ ಶಾಲೆಯಿಂದ ಬರುವುದು ಹೋಗುವುದು ಮಾಡುತ್ತಿದ್ದೆವು. ಅವಳಿಗೂ ನನ್ನ ಮಾತನ್ನು ಕೇಳುತ್ತಾ ಬರುವುದು ಇಷ್ಟ. ಹೀಗಾಗಿ ಮತ್ತೆ ನನ್ನ ವರಸೆ ಶುರುವಾಯಿತು. ಒಂದಿನ ನಾನು ‘ನಮ್ಮ ಮನೆಯಲ್ಲಿ ನನ್ನದೇ ಆಕಾರದ […]

ರೊಕ್ಕದ ಗಿಡ

ರೊಕ್ಕದ ಗಿಡ ಗೆಳೆತನವೆಂಬ ಬಾಂಧವ್ಯ ನಮ್ಮ ಎಳವೆಯಲ್ಲಿಯೇ ಹುಟ್ಟಿ ನಮ್ಮ ಜೊತೆ ಜೊತೆಗೇ ಬೆಳೆದು ಹೆಮ್ಮರವಾಗಿ ಸುಮಧುರ ನಾದದಂತೆ ಮೈಮನವೆಲ್ಲ ಪಸರಿಸುವುದು ಮತ್ತು ನಾವೆಲ್ಲ ಒಂದೊಂದು ದಿಕ್ಕಿನಲ್ಲಿ ನೆಲೆ ನಿಂತಾಗ ಆಗಿನ ಮಧುರ ನೆನಪಿನ ಸುರುಳಿಗಳು ಮುಡಿ ಮನದಾಳದಿಂದ ನಗೆಯ ಬುಗ್ಗೆ […]

ಬುರುಡೆ ಬಿಂದಾಚಾರಿ

ಬುರುಡೆ ಬಿಂದಾಚಾರಿ ‘ಏನು, ಹುಡುಗೀ ಪಸಂದಾತೇನು?’ ಜಗುಲಿಯಿಂದಲೇ ಅಕ್ಷರಶಃ ಒದರುತ್ತಾ ಬಂದ ಬಿಂದಾಚಾರಿ ಒಳಗೆ ಬರುತ್ತಲೇ, ‘ಛೇ, ಏನವಾ ಸೆಕೀ, ಒಂದಿಷ್ಟು ಥಣ್ಣಗಿಂದ ಏನರೇ ಕೊಡು,’ ಎನ್ನುತ್ತಾ ತಲೆಯ ಮೇಲಿನ ಟೋಪಿ ತೆಗೆದು ಬಾಜೂಕ ಒಗೆದ. ‘ಈಗ ಬಂದೆ’ ಎಂದೆನ್ನುತ್ತಾ ಒಳಗೆ […]

ರೋಗವಲ್ಲದ ರೋಗ

ರೋಗವಲ್ಲದ ರೋಗ ! ನಮ್ಮ ಪಕ್ಕದ್ಮನೆ ಶಾರದಾಳಿಗೆ ಯಾವಾಗಲೂ ಎಂಥದೋ ಕೊರಗು. ತನಗೇನೋ ಆಗಿದೆ, ಆರೋಗ್ಯ ಸರಿ ಇಲ್ಲ ಎಂದು ಯಾವಾಗ್ಲೂ ನರಳುವುದೇ ಆಯಿತು. ಹೊಟ್ಟೆ ನೋವಾದರೆ ಹೊಟ್ಟೆಯಲ್ಲಿ ಗಂಟಾಗಿರಬಹುದೆಂದೂ, ತಲೆ ನೋವಾದರೆ ಬ್ರೇನ್ ಟ್ಯುಮರ್ ಆಗಿರಬಹುದೆಂದೂ ಕೆಮ್ಮು ಬಂದರೆ ಕ್ಷಯವೆಂದೂ […]