ದೇವರಿಗೊಂದು ಪತ್ರ (31) ನಾ ಸೌಖ್ಯಳೆಂದು ಹೇಗೆ ಹೇಳಲಿ ಕರುಣಾಕರ? ನಿನ್ನ ಸುಳಿವೂ ಇಲ್ಲ, ಈ ನಡುವೆ! ಪ್ರಿಯಕರ ನನ್ನೊಡನೆ ತುಸು ಮುನಿಸಾಗಿರ ಬಹುದಲ್ಲವೆ ?ಹಿತಕರ! ಪತ್ರ ಕೊಂಚ ತಡವಾಗಿ ಬರೆದೆನೆಂದು ಮನದಿಂದ ದೂರಾದೆಯಾ?ಮುರಳೀಧರ ಕಾರಣಗಳ ಕೊಡಲಾರೆ ನಾ ಎಲ್ಲ ಬಲ್ಲ ಪ್ರಾಣನಾಯಕನಿಗೆ ಹೇಳತೀರದಷ್ಟು ದುಃಖವಾಗಿದೆ ಬರೆಯದೆ ಉಳಿದ ವಿಷಯಗಳಿಗಾಗಿ ನನಗೆ ಕಳೆದೆ ಹೇಗೋ ಅರಿಯೆ ಈ ನಡುವೆ ಆ ದಿನಗಳ ನುಂಗಿ ಎದೆಯೊಳಗೆ ಆದರೂ ನೀ ಸದಾ ಜೊತೆಗೆ ಇದ್ದೆ ಬಿಡದೆ ಒಂಟಿ ನನಗೆ ನೀ […]
