ದೇವರಿಗೊಂದು ಪತ್ರ (32) ನೀ.. ಮುನಿದರೆಂತ ಚೆನ್ನ ಹೇಳು ಎನ್ನ ಓ.. ವಾಸುದೇವ ನೀ.. ಮೌನವಾದರೆಂಥ ಚೆಂದ? ಹೇಳು ಓ..ಮಾಧವ ತಾಯಿ, ಕರುಳ ಕುಡಿಯ ದೂರ ಸರಿಸಿ ಮುನಿಸಿದ್ದು ಇದೆಯಾ?ಗೋವಿಂದ ಗೋಮಾತೆ ಕರುವ ಹಸಿವ ಅರಿಯದೆ ಮೊಳೆಯುಣಿಸದ್ದು ಕಂಡೆಯಾ? ಶ್ಯಾಮ ಪಕ್ಷಿ ತಾನು ಮರಿಗೆ ಗುಟುಕು ಕೊಡದೆ ಮೂನಿಸಿದ್ದು ಕಂಡೆಯಾ? ನಂದಾಗೋಪಾಲ ಈ…ಭೂಲೋಕದಲ್ಲಿ ಕ್ಷುಲ್ಲಕ ಮನುಜಳು ಮಾತ್ರ ನಾನು…ಅಚ್ಯುತ ನಿನ್ನಾಧಾರವಿರದೇ ಇನ್ನಾರು ಗತಿ ಎನ್ನ ಜೀವನ ನೌಕೆಗೆ.. ಓ ಪಾರ್ಥಸಾರಥಿ ನೀ ನಡೆಸಿದಂತೆ ನಡೆವುದೊಂದೆ ಇಚ್ಛೆ ಎನಗೆ […]
