ದೇವರಿಗೊಂದು ಪತ್ರ!( 41) ಓ ಯಶೋದಾ ನಂದನ ಈ ಪತ್ರ ಓದಿ ನೀ ನಗಬಹುದು ಇಂದು ಹೇಳುವೆ ಕೇಳು ರಾಧರಮಣ ನಾನಾಚರಿಸಿದ ಪರಿ ನಿನ್ನ ಜನ್ಮದಿನ ಮೊದಲೆರಡು ದಿನದಿಂದ ಅಮಿತ ಆನಂದ ಹರಿ ಮನದೊಳಗೆ ಸಾಲು ಯೋಚನೆ ಹತ್ತು ಹಲವು ಯೋಜನೆ ಏನ ಮಾಡಲಿ ಹರಿಯ ಜನ್ಮದಿನಕ್ಕೆ ಅಂದುಕೊಂಡಿದ್ದೆಲ್ಲ ದೇಹದೊಳಗಿನ ಆತ್ಮ ಮಾಡಿ ಮುಗಿಸಿತ್ತು ಕ್ಷಣಕ್ಕೆ ಇರಲಿ ಕೇಳು ಬಾಹ್ಯ ಆಡಂಬರವು ಮಾಡಲಿಚ್ಚಿಸಿತು ಮನವು ಪೋದೆ ಹುಡುಕುತ ನಿನಗಿಷ್ಟದ ಸುಘಂದ ಭರಿತ ಪುಷ್ಪ ಆಯ್ದು ತರಲು ಮತ್ತೆ […]
