ದೇವರಿಗೊಂದು ಪತ್ರ!( 42) ಹೇಗೆ ಇರುವೆ ಹೇಳು ನೀನು ಎನ್ನ ಹೃದಯದ ದೈವ? ಜಗದ್ರಕ್ಷಕ! ನನಗಂತೂ ಹಾದಿ ಬೇರೆಯೇ ತೋರಿದೆ ನೀನು! ಜಗದ್ಬಂಧು! ಈ ಪತ್ರ ಒಂದರ್ಥದಲ್ಲಿ ನಿನ್ನ ಉತ್ತರದ್ದೇ ಇರಬಹುದು! ಜನಾರ್ದನ! ಹೇಳುವುದು ಬಹಳವಿದೆ ಹರಿ ಮಾತು ಬರುತ್ತಿಲ ಅಕ್ಷರ ಸಾಲುತ್ತಿಲ್ಲ ಜಗತ್ಕಾರಣ! ನನ್ನಾತ್ಮದ ಮೂಲೆ ಮೂಲೆಯಲಿ ನಿನ್ನ ನಾಮಸ್ಮರಣೆಯೊಂದೆ ಜಗನ್ನಾಥ! ಗೊತ್ತೆನಗೆ ಈ ದೇಹ ಬಿಡುತ್ತಿಲ್ಲ ವಾಸನೆಗಳ ಮರ್ಕಟನಂತೆ ಮಾಧವ! ಚಿತ್ತ ಚಂಚಲತೆಯಲಿ ತೇಲುವುದು ಆಗೊಮ್ಮೆ ಈಗೊಮ್ಮೆ ಮಧುಸೂದನ! ಮೋಹದ ಬಲೆಯಲ್ಲಿ ಬೀಳುವುದು ಎಡವಿ […]
