ಧಾರವಾಡದ ಜೆ ಎಸ್ಎಸ್ ಕಾಲೇಜಿನ ನನ್ನ ಮೊದಲ ದಿನ… ನಮ್ಮದು ತಾಲೂಕೂ ಅಲ್ಲದ ಅತಿ ಚಿಕ್ಕ ಹಳ್ಳಿ, ರಟ್ಟೀಹಳ್ಳಿ.ಅಲ್ಲಿಂದ ಮೊಟ್ಟ ಮೊದಲಿಗೆ ಧಾರವಾಡಕ್ಕೆ ಬಂದದ್ದು ೧೯೬೫ ರಲ್ಲಿ, ನಾನು ಹತ್ತೊಂಬತ್ತು ವರ್ಷದವಳಿದ್ದಾಗ…ಅದೂ ಪಿ.ಯು.ಸಿ ಗೆ ಅಂದರೆ ಯಾರಿಗೂ ಸಹಜವಾಗಿಯೇ ಆಶ್ಚರ್ಯವಾದೀತು. ಹೌದು, ಶಿಕ್ಷಣ ಇದ್ದುಳ್ಳವರ ಸೊತ್ತು ಎಂಬಂತಿದ್ದ ಕಾಲಮಾನವದು. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆಯಂತೂ ಒಂದು ರೀತಿಯ ದಿವ್ಯ ನಿರ್ಲಕ್ಷ್ಯ. ಇದ್ದವರು ಮಕ್ಕಳನ್ನು ಹತ್ತಿರದ ರಾಣೆಬೆನ್ನೂರು, ಹಾವೇರಿ ಹೆಚ್ಚೆಂದರೆ ಧಾರವಾಡದಲ್ಲಿ ಬಂಧುಗಳ ಮನೆಯಲ್ಲಿ ಇಟ್ಟು ಓದಿಸುತ್ತಿದ್ದರು. ಉಳಿದವರು […]
