ಧರ್ಮ -ಧರ್ಮವು ಎಲ್ಲಾ ರೀತಿಗಳಿಂದಲೂ ವೈಶಾಲ್ಯತೆಯನ್ನು ಹೊಂದಿದ್ದು ಅದು ಸರ್ವಥಾ ಯಾವುದೇ ಒಂದು ನಿರ್ದಿಷ್ಟ ಜಾತಿಯನ್ನು ಉದ್ದೇಶಿಸಿಲ್ಲ. ಧರ್ಮವೂ ಕೂಡ ಸತ್ಯದಂತೆಯೇ ಇದಮಿತ್ಥಂ ಎಂದು ಸ್ಪಷ್ಟವಾಗಿ ಹೇಳಲು ಅಸಾಧ್ಯವಾದಂಥದೇ ವಿಷಯ. ಆದರೂ ಕುರುಡನ ಆನೆಯಂತೆ ನನಗೆ ತಿಳಿದಷ್ಟನ್ನು ಹೇಳುವ ಪ್ರಯತ್ನ ಮಾಡುವೆ. ಇಲ್ಲಿ ಚರ್ಚೆಗೆ ಮುಕ್ತ ಅವಕಾಶವಿದ್ದು ಉದ್ದೇಶವು ಅರಿವನ್ನು ಹೆಚ್ಚಿಸುವುದು ಮಾತ್ರ. ಧರ್ಮದ ಮೂಲವು ಧರ್ ಎಂಬ ಪದ. ಧರ್ ಎಂದರೆ ಧರಿಸು, ಕಾಪಾಡಿಕೋ ಎಂದು ಅರ್ಥಗಳಿವೆ. ಪೂರ್ವಾಗ್ರಹವಿಲ್ಲದೇ ಯಾವುದನ್ನು ಯಾವುದು ಇರುವ ಸ್ಥಿತಿಯಲ್ಲಿ ಹಾಗೇ […]
