ಹಚ್ಚ’ಗಿದ್ದಲ್ಲಿ ಮೇದು…’ಬೆಚ್ಚ’ಗಿದ್ದಲ್ಲಿ ಮಲಗಿ… ನಮ್ಮದು ಅತೀ ಚಿಕ್ಕ ಹಳ್ಳಿ… ಹಿರೇಕೇರೂರು ತಾಲೂಕಿನ ರಟ್ಟೀಹಳ್ಳಿ. ಆಗ ನಾವೂ ಚಿಕ್ಕವರೇ…ಇದ್ದುಳ್ಳವರ ಬೆರಳೆಣಿಕೆಯಷ್ಟು ಮನೆಗಳಲ್ಲಿ ಶೌಚಾಲಯಗಳು ಇದ್ದ ಕಾಲ. ಏನಾದರೂ ನೆಪ ಮಾಡಿಕೊಂಡು ಅಂಥ ಪರಿಚಯಸ್ಥರ ಮನೆಗೆ ಬೆಳಿಗ್ಗೆ ಭೇಟಿಕೊಡಲೇ ಬೇಕಾದ ಪರಿಸ್ಥಿತಿ ಅನೇಕರದು . ಅದು ಸಾಧ್ಯವಾಗುವದಿಲ್ಲ ಅಂದವರಿಗೆ ಬೆಳಿಗ್ಗೆ ಆರು ಗಂಟೆ ಆಗುವ ಮೊದಲೇ ಯಾರಾದರೂ ಒಬ್ಬಿಬ್ಬರು ಗೆಳತಿಯರೊಂದಿಗೆ ದೂರ ಹೊಲಗಳ ಬದುವೋ / ಮರ-ಗಿಡಗಳ ಮರೆಯನ್ನೋ ಹಿಡಿದು ಹೋಗಿ ಹಗುರಾಗಿ ಬರುವುದು. ಬಂದಮೇಲೆ “ಇದ್ದಿಲು/ ದೇಶೀ ದಂತ […]
