ಹದಿ ಹರೆಯದ ಸಮಸ್ಯೆಗಳು.. ಹದಿ ಹರೆಯ ಎಂಬುದು ಎಲ್ಲರ ಜೀವನದ ಒಂದು ಮಹತ್ವದ ಘಟ್ಟ. ಅಲ್ಲಿ ಆಶೆಗಳಿವೆ, ಕನಸುಗಳಿವೆ, ಅವುಗಳನ್ನು ಕೈಗೂಡಿಸಿಕೊಳ್ಳಲೋಸುಗ ಮಾಡುವ ವಿಫಲ ಹಾಗೂ ಸಫಲ ಯತ್ನಗಳಿವೆ.. ವಿಫಲರಾದಾಗ ಜೀವದ ಮೇಲಿನ ಆಶೆ ತೊರೆಯುವ, ಸಫಲರಾದಾಗ ಪ್ರಪಂಚವನ್ನೇ ಮರೆಯುವ ಘಟ್ಟವದು. ಮಕ್ಕಳ ಸಮಸ್ಯೆಗಳನ್ನು ಪಾಲಕರು ತಮ್ಮದೇ ಆದ ಒಂದು ಅಳತೆಗೋಲಿನಿಂದ ಅಳೆಯುತ್ತಾರೆ. ತಾವು ಆ ಪರಿಸ್ಥಿತಿಯಲ್ಲಿದ್ದಾಗ ತಮ್ಮ ತಂದೆ ತಾಯಿಯರು ಏನು ಮಾಡಿದ್ದರೋ ಅದನ್ನೇ ತಮ್ಮ ಮಕ್ಕಳಿಗೂ ಮಾಡುತ್ತ ತಾವು ಸರಿಯಾದ ಮಾರ್ಗದಲ್ಲಿಯೇ ಮುಂದುವರಿಯುತ್ತಿದ್ದೇವೆ ಎಂದು […]
