ಹಳದಿ ಪಟ್ಟಿಯ ಹಾರ್ನೆಟ್….! ಪ್ರಾಣಿ-ಪಕ್ಷಿಗಳು ವಾಸಕ್ಕಾಗಿ ವಸತಿಯನ್ನು ನಿರ್ಮಿಸಿಕೊಳ್ಳುವುದು ಸಹಜ. ಹೀಗೆ ವಸತಿ ನಿರ್ಮಿಸಿಕೊಳ್ಳುವ ಕೀಟ ಜಗತ್ತಿನ ಕಣಜದ ಗೂಡು ವಿಸ್ಮಯಕಾರಿಯಾದ್ದು! ಗೀಜಗನ ಹಕ್ಕಿಯ ಗೂಡಿನಷ್ಟೇ ಸೋಜಿಗ ಅರ್ಧದಿಂದ ಮೂರು ಅಡಿ ಸುತ್ತಳತೆಯ ಗೂಡು ನಿರ್ಮಿಸುವ ಕಣಜ ತನ್ನ ಕುಟುಂಬದ ಸಂಖ್ಯೆಗನುಗುಣವಾಗಿ ಗೂಡನ್ನು ನಿರ್ಮಿಸಿಕೊಳ್ಳುತ್ತದೆ. ಸಗಣಿ, ಸೂಕ್ತವಾದ ಮೆದು ಮಣ್ಣನ್ನು ಉಂಡೆಯ ರೂಪದಲ್ಲಿ ಕಟ್ಟಿ ಹೊತ್ತು ತಂದು, ಬಾಯಿ ಮೂಲಕ ಹೊರಡುವ ಜೊಲ್ಲನ್ನು ಬಳಸಿ ಕಟ್ಟಿದ ಗೂಡು ನೋಡಲು ಚೆಂದ. ನೆಲ ಮನೆಯ ಮಾಡು ಎತ್ತರದ ಮರದ […]
