ಹಲಗೆ ಹಣ್ಣು ಬೇಸಿಗೆಯೆಂದರೆ ಮಲೆನಾಡಿನಲ್ಲಿ ಕಾಡುಹಣ್ಣುಗಳ ಸುಗ್ಗಿ, ನಾನಾ ತರಹದ ಹಣ್ಣುಗಳ ಖಜಾನೆ, ಮುಳ್ಳುಣ್ಣು, ಕೌಳಿಹಣ್ಣು, ಗುಡ್ಡೇಗೇರು, ಕಾಡುಮಾವು, ಕಾಕೇ ಹಣ್ಣು, ಬುಕ್ಕೆ, ನೇರಳೆ, ಹಲಸು, ತುಂಬ್ರಿ, ಸಂಪಿಗೆ ಹಣ್ಣು, ಕೇಪುಳ ಹಣ್ಣು, ನೆಲ್ಲಿ, ರಂಜಲು, ಪುನ್ನೇರಲು-ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಪ್ರಕೃತಿದತ್ತ ಹಣ್ಣುಗಳಿಗೆ ಅವುಗಳದ್ದೇ ಆದ ವಿಶಿಷ್ಟ ರುಚಿ, ವಿಶೇಷವಾದೊಂದು ಪರಿಮಳ, ಕೆಲವು ಸಿಹಿ, ಕೆಲವು ಹುಳಿ, ಅತ್ತ ಸಿಹಿಯೂ ಅಲ್ಲದ, ಇತ್ತ ಹುಳಿಯೂ ಅಲ್ಲದ ಮಿಶ್ರ ರುಚಿಯ ಹಣ್ಣೊಂದಿದೆ. ಅದು ಹಲಗೆ ಹಣ್ಣು. […]
