ಹಸೆ ಚಿತ್ತಾರ… ಹಬ್ಬ ಎಂದಾಗ ಕೆಲವು ಪೂರ್ವ ತಯಾರಿ ಬೇಕಾಗುತ್ತದೆ. ಮಲೆನಾಡಿನ ಕೆಲವು ಹಬ್ಬಗಳಲ್ಲಿ ಎಡೆ (ನೈವೇದ್ಯ) ಇಡುವುದಕ್ಕೆಂದೇ ವಿಶೇಷವಾದ ಬುಟ್ಟಿಗಳನ್ನು ಸಿದ್ಧಗೊಳಿಸಲಾಗುತ್ತದೆ. ಮಹಿಳೆಯರು ಬಿದಿರಿನ ಬುಟ್ಟಿಗೆ ಕೆಮ್ಮಣ್ಣು ಬಳಿದು, ವಿವಿಧ ವಿನ್ಯಾಸಗಳಲ್ಲಿ ಚಿತ್ತಾರ ಬಿಡಿಸಿ ನೈವೇಧ್ಯದ ಬುಟ್ಟಿಯನ್ನು ಸಜ್ಜುಗೊಳಿಸುತ್ತಾರೆ. ಹೀಗೆ ಶೃಂಗಾರಗೊಳ್ಳುವ ಬುಟ್ಟಿಯನ್ನು ‘ಭೂಮಣ್ಣಿ ಬುಟ್ಟಿ’ ಎಂತಲೂ ಕರೆಯುತ್ತಾರೆ, ಇಲ್ಲಿ ಬಳಕೆಯಾಗುವುದು ಹಸೆ ಚಿತ್ತಾರವೆಂಬ ಪ್ರಾಚೀನ ಜಾನಪದ ಕಲೆ. ಬಿಳಿ ಹಸೆ, ಕಪ್ಪು ಹಸೆ, ಕೆಮ್ಮಣ್ಣು ಹಸೆ ಎಂಬ ವಿಭಾಗಗಳಲ್ಲಿ ಪ್ರಕೃತಿಯನ್ನು ಸಾಂಕೇತಿಸುವ ಚಿತ್ರಗಳೇ ಇಲ್ಲಿ […]
