ಹೆಸರಿನಿಂದೇನಾಗುತ್ತೆ…!? ಒಂದೇ ದಿನದಲ್ಲಿ ಮುಗಿಸಬೇಕಾದ ಅಫೀಸಿನ ತುರ್ತು ಕೆಲಸವೊಂದು ನನ್ನ ಹೆಗಲಿಗೇರಿತ್ತು. ಅದೂ ಎಪ್ಪತ್ತು ಕಿ.ಮೀ. ಅಂತರದ ಎರಡು ನಗರಗಳ ಸರ್ಕಾರಿ ಕಚೇರಿಯಲ್ಲಿ. ಮೊದಲ ಕಚೇರಿ ತೆರೆಯುವ ಹೊತ್ತಿಗೆ ಅಲ್ಲಿದ್ದು, ಆಗಬೇಕಾದ ಕೆಲಸದ ವ್ಯವಸ್ಥೆ ಮಾಡಿದೆ. ಸಂಬಂಧಿಸಿದ ನೌಕರ ಇವತ್ತು ಸಂಜೆ ಐದರೊಳಗೇ ಬರಬೇಕು, ಇಲ್ಲದಿದ್ದರೆ ಒಂದು ವಾರ ಕಳೆದೇ ಬರಬೇಕೆಂಬ ಎಚ್ಚರಿಕೆ ಮಾತು ಹೇಳಿದ್ದ. ನಂತರ ಪ್ರಯಾಣಿಸಿದ್ದು ಅಲ್ಲಿಂದ ಎಪ್ಪತ್ತು ಕಿ.ಮೀ ಅಂತರದ ಮತ್ತೊಂದು ಕಚೇರಿಗೆ. ಆ ಕಚೇರಿಯ ಕೆಲಸ ಮುಗಿಸಿ, ಅಗತ್ಯ ದಾಖಲೆ ಪಡೆದು […]
