ಹೀಗೊಬ್ಬ ‘ಕನಸು’ಗಾರ ಶಿಕ್ಷಕನಾದ ಕಥೆ.. ಅದೊಂದು ಕಾಲವಿತ್ತು.ಆಸಕ್ತಿ,ಅರ್ಹತೆ,ಅನುಕೂಲಗಳು ಇದ್ದವರು ಮಾತ್ರ ಶಿಕ್ಷಣದ ಬಗ್ಗೆ ಯೋಚಿಸುತ್ತಿದ್ದರು.ಬಹುತೇಕ ಜನ ಕುಲಕಸುಬನ್ನು ಅಲಿಖಿತ ಒಪ್ಪಂದದಂತೆ ಸ್ವೀಕರಿಸಿ ಬದುಕುವವರೇ ಜಾಸ್ತಿ.ನಮ್ಮ ಮನೆಯಲ್ಲಿ ಬಹಳಷ್ಟು ಆಸಕ್ತಿ, ಒಂದಿಷ್ಟು ಅರ್ಹತೆ ಬಿಟ್ಟರೆ ಅನುಕೂಲಗಳು ಶೂನ್ಯ. ”ಒಂದೂರಿನಲ್ಲಿ ಒಬ್ಬ ಬಡ ಬ್ರಾಮ್ಹಣನಿದ್ದ.. ಅವನಿಗೆ ಮನೆತುಂಬ ಮಕ್ಕಳು” ಎಂದು ಕಥೆ ಸುರುವಾದರೆ ” ನಮ್ಮದಲ್ಲ ತಾನೇ” ಅನಿಸಿಬಿಡುವಷ್ಟು ಸಾಮ್ಯತೆ. ನಮ್ಮ ಅಣ್ಣನಿಗೋ ಹೇಗಾದರೂ ಕಲಿಯಲೇ ಬೇಕು ಎಂಬ ಹಟ. ಊರಲ್ಲಿ ಹೈಸ್ಕೂಲ್ ಇರಲಿಲ್ಲವಾದ್ದರಿಂದ ಪರ ಊರುಗಳಲ್ಲಿ ಇರಬೇಕು. ಅವನು […]
