ಹೀಗೊಂದು ಅಲ್ಬಮ್ ಕಥೆ… ಇತ್ತೀಚೆಗೆ ನನ್ನ ಎರಡನೇ ಮಗಳ ಮದುವೆಯ ಇಪ್ಪತ್ತೊಂದನೆಯ ವಾರ್ಷಿಕೋತ್ಸವವಿತ್ತು. ಲಾಕ್ ಡೌನ್ ಇದ್ದ ಕಾರಣ ಹೊರಗೆ ಹೋಗುವ ಮಾತೇ ಇರಲಿಲ್ಲ. ಮನೆಯಲ್ಲಿಯೇ ಏನೋ ಕೆಲ ಕಾರ್ಯಕ್ರಮಗಳ plan ಆಗಿತ್ತು. ನಾನು ಅವರ ಮದುವೆಯ ಅಲ್ಬಮ್ ತೆಗೆದು ನೋಡಲೆಂದು ಹೊರಗಿಟ್ಟಿದ್ದೆ. ಇಪ್ಪತ್ತು ವರ್ಷಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ನೋಡುವದು ನನ್ನ ಉದ್ದೇಶವಾಗಿತ್ತು. ಅದನ್ನು ಸಾಕಷ್ಟು ಮಜಾ ತೆಗೆದುಕೊಂಡು ಒಂದೊಂದೇ ಪುಟ ತೆರೆದು ನೆನಪುಗಳನ್ನು ಮರಳಿ ಮರಳಿ ಮೆಲುಕು ಹಾಕುತ್ತಾ ಹಸಿರಾಗಿಸಿಕೊಂಡದ್ದಾಯಿತು. ಅಲ್ಬಮ್ ತುಂಬಾ ದೊಡ್ಡದಿದ್ದು ಒಂದೇ […]
