ಸಮಾಜದ ಒಳಿತನ್ನು ಬಯಸಿ ಅದಕ್ಕಾಗಿ ದುಡಿಯುವ ಸಜ್ಜನರು ಪ್ರತಿ ಕಾಲಮಾನಗಳಲ್ಲಿಯೂ ಬಂದು ಹೋಗಿದ್ದಾರೆ. ತಮ್ಮ ಜೀವಿತದ ಅವಧಿಯಲ್ಲಿ ತಮಗೆ ಪ್ರೇರಣಾದಾಯಕವೆನಿಸಿದ ವ್ಯಕ್ತಿಚಿತ್ರಣಗಳನ್ನು ಸನ್ಮಾನ್ಯ ಡಿವಿಜಿ ಅವರು ತಮ್ಮ ಜ್ಞಾಪಕ ಚಿತ್ರಶಾಲೆ ಎಂಬ ಎಂಟು ಸಂಪುಟಗಳ ಬೃಹತ್ ಗ್ರಂಥದಲ್ಲಿ ದಾಖಲಿಸಿದ್ದಾರೆ. ಇದನ್ನು ಪರಿಚಯಿಸುವ ಒಂದು ಪುಟ್ಟ ಪ್ರಯತ್ನವೇ ಈ ಉಪನ್ಯಾಸದ ಉದ್ದೇಶ.
