ಕಲಾವಿದೆಯ ಕೈಚಳಕ ಕೆಲವು ಸಮುದಾಯದ ಮದುವೆ, ವರಪೂಜೆಯ ಕಾರ್ತಕ್ರಮಗಳಲ್ಲಿ ನಡೆಯುವ ಶಾಸ್ತ್ರಗಳಲ್ಲಿ ಬಾಗಿನ ಅಥವಾ ಆರತಿ ತಟ್ಟೆಯ ಜೊತೆಗೆ ಕೆಲವು ಅಲಂಕಾರಿಕ ವಸ್ತುಗಳನ್ನು ಇಡುವುದನ್ನು ಕಾಣಬಹುದು. ಇಂತಹ ಬಗೆ ಬಗೆಯ ಅಲಂಕಾರಿಕ ವಸ್ತುಗಳನ್ನು ವಧು ಅಥವಾ ವರನ ಕಡೆಯವರೇ ಸ್ವತಃ ಕೈಯಿಂದ ತಯಾರಿಸಿಡುತ್ತಾರೆ. ಹಿಂದಿನ ಕಾಲದಲ್ಲಿ ಹಳ್ಳಿಗಾಡಿನಲ್ಲಿರುವವರಿಗೆ ತಮ್ಮ ಕಲೆಗಾರಿಕೆಯನ್ನು ಪ್ರದರ್ಶಿಸುವ ವೇದಿಕೆಗಳು ಇರಲಿಲ್ಲ. ಮದುವೆ, ಮುಂಜಿ, ಹಬ್ಬಗಳ ಸಮಯದಲ್ಲಿ ನಡೆಯುವ ಕಾರ್ಯಕ್ರಮಗಳು ಇವರಲ್ಲಿ ಸುಪ್ತವಾಗಿದ್ದ ತಮ್ಮ ಕಲೆಗಾರಿಕೆಯನ್ನು ಹೊರ ಜಗತ್ತಿಗೆ ತೋರಿಸಲೂ ಪ್ರದರ್ಶಿಸಲೂ ಅವಕಾಶ ಒದಗಿಸುತ್ತಿದ್ದವು. […]
