Need help? Call +91 9535015489

📖 Print books shipping available only in India. ✈ Flat rate shipping

someವಾದ someದರ್ಶನ – ಸಂಚಿಕೆ 1

someವಾದ someದರ್ಶನ – ಸಂಚಿಕೆ 1
ಆಹ್ವಾನಿತ ಅತಿಥಿಗಳ ಜೊತೆ ಅವರ ಯಾವುದಾದರೂ ಒಂದು ಗುಣವಿಶೇಷ ಅಥವಾ ಸಾಧನೆ ಕುರಿತಾಗಿ ಒಂದಷ್ಟು ಸಂಭಾಷಣೆ… ಒಂದಷ್ಟು ಮಾತುಕತೆ…. ಒಂದಷ್ಟು ಪರಸ್ಪರ ಕಲಿಕೆ. ಇದು “someವಾದ someದರ್ಶನ” ದ ಉದ್ದೇಶ.
ಮೊದಲ ಸಂಚಿಕೆಯಲ್ಲಿ ನಮ್ಮ ಜೊತೆ ಇರುತ್ತಾರೆ : ಸುಧಾ ಪತ್ರಿಕೆಯಲ್ಲಿ ವರ್ಷಗಳಿಂದ ಕೇಳುಗರ ಪ್ರಶ್ನೆಗಳಿಗೆ ತಮ್ಮದೇ ನವಿರಾದ ಸ್ಟೈಲಿನಲ್ಲಿ ಉತ್ತರಿಸುತ್ತ ಬಂದಿರುವ, ರಾಂ ಅವರು…

ಜನಪದ ಜಗುಲಿ (ಈ-ಜಗುಲಿ ೩)

KSSVV/ ಜನಪದ ಗೀತಗಳು Anivaasi UK ತಂಡ ಪ್ರಸ್ತುತ ಪಡಿಸುವ ವಿವಿಧ ಪ್ರಕಾರದ ಜನಪದ ಗೀತೆಗಳ ನೇರ ಪ್ರಸಾರ.
ಈ ಕಾರ್ಯಕ್ರಮದಲ್ಲಿ ಮೈಸೂರಿನ ಹೆಸರಾಂತ ಬಹುಮುಖ ಪ್ರತಿಭೆ ಗಾಯಕ, ನಟ,ವಾದಕ ದೇವಾನಂದವರಪ್ರಸಾದ ಅವರಿಂದ ಜನಪದ ಪ್ರೇಮಗೀತೆಗಳು, ದುಗ್ಗಾಲಮ್ಮನ ಪದ, ಧಾರೆ ಹಾಡು (ಶೋಭಾ ಸಾಗರ್), ಸೋಬಾನೆ,ಬಯಕಿ, ಬಾಣಂತಿ ಹಾಡುಗಳಲ್ಲದೆ ಲಾಲಿ ಹಾಡು, ಶಿಶುಪ್ರಾಸ, ಗೀಗೀ ಪದ ಇವುಗಳ ಸಂಭ್ರಮ. ಸುಪ್ರಸಿದ್ಧ ಮಕ್ಕಳ Infobells animation videos ಗೆ ದನಿಕೊಟ್ಟ ದೀಪಶ್ರೀ ಅವರ ಗಾಯನವೂ ಇದೆ.
ಜೊತೆಗೆ ಯುಕೆದ ಕಲಾವಿದರು.

ಮರೆಯಲಾಗದ ಸಾಹಿತ್ಯದ ವ್ಯಕ್ತಿತ್ವ – ಹುಯಿಲಗೋಳ ನಾರಾಯಣರಾವ್

ಹುಯಿಲಗೋಳ ನಾರಾಯಣರಾವ್ ಎಂದ ಕೂಡಲೇ ನೆನಪಾಗುವುದು “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಕನ್ನಡ ನಾಡಗೀತೆ. ಸ್ವಾತಂತ್ರ ಹೋರಾಟಗಾರರು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದ ವ್ಯಕ್ತಿತ್ವ ಇವರದು,
“ಮರೆಯಲಾಗದ ಸಾಹಿತ್ಯದ ವ್ಯಕ್ತಿತ್ವ” ಈ ಸರಣಿಯ ನೇರ ಪ್ರಸಾರದಲ್ಲಿ “ಹುಯಿಲಗೋಳ ನಾರಾಯಣರಾವ್” ಅವರ ಕುರಿತು ಶ್ರೀ. ಹರ್ಷ ಡಂಬಲ್ ಅವರು ಮಾತನಾಡುತ್ತಾರೆ.

ಕೀರ್ತಿ ನೆನಪು

ಕೀರ್ತಿನಾಥ ಕುರ್ತಕೋಟಿ ಇವರ ನೆನಪಿನಲ್ಲಿ ಅಭಿನಯ ಭಾರತಿ, ಜಿ,ಬಿ ಮೆಮೋರಿಯಲ್ ಟ್ರಸ್ಟ್,, ಕೂತುಕೋಟಿ ಮೆಮೋರಿಯಲ್ ಟ್ರಸ್ಟ್ ಮತ್ತು ಮೂಕ ಟ್ರಸ್ಟ್, ಇವರ ಸಂಯುಕ್ತಾಶ್ರಯದಲ್ಲಿ “ಕೀರ್ತಿ ನೆನಪು” ನೇರ ಪ್ರಸಾರ ಕಾರ್ಯಕ್ರಮ ವಿವಿಡ್ಲಿಪಿಯಲ್ಲಿ ನೋಡಬಹುದು.

ಜೀವಿಸಿದರೆ ಸಾಕಾ? ವಿಕಸಿಸಬೇಕಾ?

ಉದ್ಯೋಗ, ಮನೆ, ಮಕ್ಕಳು ಒಂದು ಹಂತದ ಯಶಸ್ಸು ಇಷ್ಟೆಲ್ಲ ಸಿಕ್ಕನಂತರವೂ ಮನಸ್ಸಿನಲ್ಲಿ ಏನೋ ಅತೃಪ್ತಿ, ಹೇಳಿಕೊಳ್ಳದ ಖಾಲಿತನ ” ಲೈಫು ಇಷ್ಟೇನಾ” ಎಂದು ಅನ್ನಿಸುವುದೂ ಇದೆ. ಅಷ್ಟೇ ಏಕೆ ಎಲ್ಲ ಇದ್ದೂ ಸಂತೋಷದಿಂದ ಇದ್ದೀವಾ, ಯವಾಗಲೂ, ಉತ್ಸಾಹದ ಲವಲವಿಕೆಯ, ಉತ್ಕಟವೆನ್ನಿಸುವ ಹಾಗೆ ನಮ್ಮ ಬದುಕಿದೆಯಾ? ಸಾಹಿತ್ಯ, ಕಲೆ, ಸಂಗೀತವೂ ಸೇರಿದಂತೆ ಎಲ್ಲ ಸೃಜನಶೀಲಕೃತಿಗಳೂ ಬದುಕನ್ನು ವಿಕಸನದೆಡೆಗೆ ನಡೆಸುವುದಕ್ಕೆ ನೆರವಾಗುವ ಸಂಗತಿಗಳು. ಕೇವಲ ಜೀವಿಸಿದರೆ ಸಾಕಾ? ವಿಕಸಿಸಬೇಕಾ? ಎಲ್ಲಕ್ಕಿಂತ ಮುಖ್ಯವಾಗಿ ವಿಕಸನ ನಮ್ಮದೇ ಆಯ್ಕೆ. ಹಾಗಾದರೆ ನಾವೇಕೆ ವಿಕಸಿಸಬೇಕು? ಸಾಹಿತ್ಯ, ಆಧ್ಯಾತ್ಮ, ವಿಜ್ಞಾನದ ಮೂಲಕ ವಿಕಸನದ ಅನಂತ ಸಾಧ್ಯತೆಗಳನ್ನು, ನಮ್ಮೆಲ್ಲರ ಜೀವನಕ್ಕಿರುವ ಬಹುದೊಡ್ಡ ಘನತೆಯನ್ನು ಎಲ್ಲರೂ ಒಟ್ಟಾಗಿ ಅರಿಯುವ ಕಾರ್ಯಕ್ರಮ ” ಜೀವಿಸಿದರೆ
ಸಾಕಾ ? ವಿಕಸಿಸಬೇಕಾ? “

ವಿವಿಡ್ಲಿಪಿ ಕಾರ್ಯಕ್ರಮ: “ಮಾಧ್ಯಮದ ಭಾಷೆ ಬದಲಾದ ಬಗೆ!”

ಕಾರ್ಯಕ್ರಮ: “ಮಾಧ್ಯಮದ ಭಾಷೆ ಬದಲಾದ ಬಗೆ!” ನಮ್ಮೊಡನೆ ಮಾತನಾಡುವವರು – ಪತ್ರಕರ್ತ ಶ್ರೀ. ಅನಂತ ಚಿನಿವಾರ್ ಇವರು ಜನಶ್ರೀ, ಪಬ್ಲಿಕ್ ಟಿ ವಿ, ಸುವರ್ಣ ನ್ಯೂಸ್ ಹಾಗೂ ನ್ಯೂಸ್18 ಚಾನಲ್ಲುಗಳ ಪ್ರಧಾನ ಸಂಪಾದಕರಾಗಿ ದುಡಿದವರು. ಅದಕ್ಕೂ ಮುನ್ನ ‘ಇಂಡಿಯಾ ಟುಡೇ’ ಹಾಗೂ […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭ – ನಾಡೋಜ ಕೆ. ಎಸ್ ನಿಸಾರ ಅಹಮದ್ – ಉದ್ಘಾಟನಾ ಭಾಷಣ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭ – ಕಾರ್ಯಕ್ರಮದ ಉದ್ಘಾಟನೆಯ ಚಿತ್ರಣ ನಾಡೋಜ ಕೆ. ಎಸ್ ನಿಸಾರ ಅಹಮದ್ – ಉದ್ಘಾಟನಾ ಭಾಷಣ ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ – https://bit.ly/2JWfQLl Subscribe on YouTube: https://www.youtube.com/channel/UCJBPXumxeMcM75mcV_jT3Iw Like us on Facebook: https://www.facebook.com/vividlipi […]

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭ – ಕಾರ್ಯಕ್ರಮದ ಉದ್ಘಾಟನೆಯ ಚಿತ್ರಣ

ಧಾರವಾಡ ಸಾಹಿತ್ಯ ಸಂಭ್ರಮ ೨೦೧೭ – ಕಾರ್ಯಕ್ರಮದ ಉದ್ಘಾಟನೆಯ ಚಿತ್ರಣ ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ – https://bit.ly/2JWfQLl Subscribe on YouTube: https://www.youtube.com/channel/UCJBPXumxeMcM75mcV_jT3Iw Like us on Facebook: https://www.facebook.com/vividlipi Follow us on Twitter: https://www.twitter.com/vividlipi Follow us on […]