Your Cart

Need help? Call +91 9535015489

📖 Print books shipping available only in India. ✈ Flat rate shipping

ಬದುಕು ಜಟಕಾ ಬಂಡಿ… ವಿಧಿಯದರ ಸಾಹೇಬ

ಬದುಕು ಜಟಕಾ ಬಂಡಿ… ವಿಧಿಯದರ ಸಾಹೇಬ….” “ನಾನೊಬ್ಬ ವಿಫಲ ಉದ್ಯಮಿ…. ಯೌವುದೂ ನನ್ನ plan ನಂತೆ ನಡೆಯಲಿಲ್ಲ. ಇದಕ್ಕೆ ಕೇವಲ ನಾನೇ ಹೊಣೆ ನನ್ನಾಸ್ತಿ ವಿವರ ಕೊಟ್ಟಿದ್ದೇನೆ. ಅದನ್ನು ಮಾರಿ ತಲುಪಿಸಬೇಕಾದವರಿಗೆ ಹಣ ತಲುಪಿಸಿ” ಇದು ಸಾಯುವ ಮುನ್ನ ಉದ್ಯಮಿ ಸಿದ್ಧಾರ್ಥ ಬರೆದರು ಎನ್ನಲಾದ ಪತ್ರ… ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಉದ್ಯಮಿಯೊಬ್ಬರ ಈ ದುರಂತ ಬದುಕು ದೈವದ ಮುಂದೆ ಮನುಷ್ಯ ಎಷ್ಟೊಂದು ದುರ್ಬಲ ಎನ್ನುವದನ್ನು ನೆನಪಿಸುತ್ತದೆ. ಯಕ್ಷ ಯಮನಿಗೆ ಕೇಳಿದ “ಜಗತ್ತಿನಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿ ಯಾವುದು” […]

ಗಾಡ್ ಇಸ್ ಇನ್ ದ ಹೇವನ್ ಆ್ಯಂಡ್ ಆಲ್ ಇಸ್ ರೈಟ್ ವಿಥ್ ದ ವಲ್ಡ್

God is in the heaven and all is right with the world ಅವಳ ಹೆಸರು ಕವಿತಾ… ಬೀದರ ಜಿಲ್ಲೆಯ ರಾಜಗೀರ ಹಳ್ಳಿಯವಳು. ಶಾಲೆಯ ಮೆಟ್ಟಿಲು ಏರಿಲ್ಲ. ಹಿರಿಮಗಳ ಸಹಾಯದಿಂದ ತನ್ನ ಹೆಸರು ಬರೆಯಲು ಮಾತ್ರ ಕಲಿದ್ದಾಳೆ.  But she is a university by herself. ‘ಸುಶಿಕ್ಷಿತರೆಲ್ಲ ಸುಸಂಸ್ಕೃತರಲ್ಲ” ಎಂಬುದಾಗಿ ಮಾತೊಂದಿದೆ. ಅದನ್ನೇ ಇನ್ನೊಂದು ರೀತಿಯಲ್ಲೂ ಹೇಳಬಹುದು. “ಅಶಿಕ್ಷಿತರೆಲ್ಲ ಅನಾಗರಿಕರಲ್ಲ” ಇದು ಈ ಐದು ವರ್ಷಗಳ ಲ್ಲಿ ನಾನು ಕವಿತಾಳಿಂದ ಕಲಿತ ಪಾಠ. […]

ರೋನೇ ಕೋ ಏಕ ಕಂಧಾ ಚಾಹಿಯೇ

ರೋನೇ ಕೋ ಏಕ ಕಂಧಾ ಚಾಹಿಯೇ… ನಿನ್ನೆ ಸಾಯಂಕಾಲ ಏಳು ಗಂಟೆ. ಕರೆ ಗಂಟೆ ಬಾರಿಸಿತು… ಎದ್ದು ಹೋಗಿ ಬಾಗಿಲು ತೆರೆದಾಗ ನಮ್ಮದೇ ಕಾಲನಿಯ ಸವಿತಾ. “ಬನ್ನಿ ಒಳಗಡೆ ಎಂದೆ”. “ನೀವೇ ಬನ್ನಿ ಆಂಟಿ.  club house  ನಲ್ಲಿ ಕೂತು ಮಾತಾಡೋಣ” ಎಂದಳು. ಹೆಚ್ಚು ಪ್ರಶ್ನಿಸದೇ ಹಿಂಬಾಲಿಸಿದೆ. ಕುರ್ಚಿಯ ಮೇಲೆ ಕೂಡುತ್ತಲೇ ಜೋರಾಗಿ ಅಳತೊಡಗಿದಳು. ನಾನು ಗಾಬರಿಯಾದೆ. ಅವಳನ್ನು ಈ ಮೊದಲು ನೋಡಿಯಷ್ಟೇ ಪರಿಚಯ. ಒಮ್ಮೆ ಮಾತ್ರ ಮಾತಾಡಿಸಿದು. ಅದೂ ಕೇವಲ ಕೆಲವೇ ನಿಮಿಷ. ಹೆಚ್ಚೇನೂ ಗೊತ್ತಿರದ […]

ನಂಬುವದೋ…. ಬಿಡುವದೋ…ನೀವೇ ಹೇಳಿ…

ನಂಬುವದೋ…. ಬಿಡುವದೋ…ನೀವೇ ಹೇಳಿ… ನಮ್ಮ ಕಡೆಗೆ ಕೆಲವು ನಂಬಿಕೆಗಳಿವೆ. ಅವು ಮೂಢ ನಂಬಿಕೆಗಳೇ ಅಲ್ಲವೇ ಎಂಬುದನ್ನು ಬಲ್ಲವರು ಹೇಳಬೇಕು.’ಮೂಢ’ ಶಬ್ಧ ನಮ್ಮ ಶಬ್ಧಕೋಶಗಳೊಳಗೆ ಸೇರುವಷ್ಟರಲ್ಲೇ ನಮ್ಮ ನಂಬುಗೆಗಳು ಗಟ್ಟಿಗೊಂಡಿದ್ದವು. ಅವುಗಳನ್ನು ನಂಬಿ ಅನಾಹುತಗಳೇನೂ ಆಗಿರಲಿಲ್ಲ. ಅಂದ ಮೇಲೆ ಬದಲಿಸಬೇಕೆಂಬ ಭಾವನೆ, ಒತ್ತಾಯ ಯಾವುದೂ ಇರಲಿಲ್ಲ. ನಂಬಿದ್ದು ಆಕಸ್ಮಿಕವಾಗಿ ನಿಜವಾದರೆ ನಂಬಿಗೆಗೆ credit, ನಿಜವಾಗಲಿಲ್ಲವೋ’ಕತ್ತೆ ಬಾಲ’ ಹೋಯ್ತು ಎಂಬ ತತ್ವ ನಮ್ಮನ್ನು ಸುರಕ್ಷಿತ ವಲಯದಲ್ಲೇ ಇರಗೊಟ್ಟಿತ್ತು. ಇಂದು ಇದೆಲ್ಲ ಯಾಕೆ ನೆನಪಾಯಿತೆಂದರೆ ಬೆಳಿಗ್ಗೆ ಸೀರೆಯುಡುವಾಗ ಅದು ಗೊತ್ತಿಲ್ಲದೇ ಉಲ್ಟಾ […]

ವೊ ದಿನ್ ಭೀ ಕ್ಯಾ ದಿನ್ ಥೆ

ವೊ ದಿನ್ ಭೀ ಕ್ಯಾ ದಿನ್ ಥೆ.. “ ನಾ ಇನ್ನ ಯಾವದೇ ಧಾರ್ಮಿಕ ಕಾರ್ಯ ಕ್ರಮ ಮಾಡಸ್ಲಿಕ್ಕೆ ಹೋಗಬಾರದಂತ ಮಾಡೇನಿ…. ಜನರೊಳಗ ಈಗ ಮೊದಲಿನ ಶೃದ್ಧಾ ಇಲ್ಲ. ಕಾಟಾಚಾರಕ್ಕೆ ಮಾಡಿ ಮುಗಸ್ತಾರ. ಮಾಡಬೇಕು ಅನ್ನೋಕಿಂತ ತೋಸ್ಗೋಬೇಕನ್ನೋದ ಭಾಳ ಇರ್ತದ…. ಧರ್ಮ, ನಂಬಿಕೆ ಜಗದಾಗ, ಬರೇ ಆಡಂಬರ ಇರ್ತದ. ಮಾಡಬೇಕದ್ದನ್ನು ಮೊಟಕ ಮಾಡಿ, ಬಿಡಬಹುದಾದ್ದರ ಮೆರವಣಿಗಿ ನಡೀತದ… ಮನಸ್ಸಿಗೆ ಭಾಳಾ ಬ್ಯಾಸರಾಗ್ತದ…. ಹೌದಪಾ ಸಂಸಾರದ …. ಖರ್ಚದ ಅನ್ನೋ ದರ್ದ ಅಂತೂ ಇಲ್ಲ… ಅದರ ಬದ್ಲು ಶೃದ್ಧಾದ್ಲೆ […]

ತೋರಾ ಮನ ದರಪನ ಕಹಲಾಯೆ

ತೋರಾ ಮನ ದರಪನ ಕಹಲಾಯೆ… 1970 ರ ದಶಕ…. ಧಾರವಾಡದ ‘ಕರ್ನಾಟಕ ಕಲೋದ್ಧಾರಕ ಸಂಘ’ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಶ್ರೀ ರಂಗರಂಥವರ ಮಾರ್ಗದರ್ಶನದಲ್ಲಿ ಅನೇಕ ಅತಿರಥ- ಮಹಾರಥರು ಅದರ ಸದಸ್ಯರಾಗಿದ್ದರು. ಧಾರವಾಡದ ಒಳ ಹೊರಗೆ ಸತತ ನಾಟಕಪ್ರಯೋಗಗಳಾಗುತ್ತಿದ್ದ ಸಮಯವದು. ಆಗ ಸಂಘದಲ್ಲೊಂದು ಪರಿಪಾಠವಿತ್ತು. ಯಾವುದೇ ನಾಟಕವಾದ ಒಂದು ವಾರದಲ್ಲಿ ಒಂದು ಸಭೆ ಸೇರಿ’ಸ್ಟೂಲ್ ಪ್ರೋಗ್ರಾಂ’ ಎಂಬ ಕಾರ್ಯಕ್ರಮವೊಂದು ಜರುಗುತ್ತಿತ್ತು. ಅದು ಮುಗಿದ ನಾಟಕದpost martum. . ನಾಟಕಕ್ಕೆ ಸಂಬಂಧಿಸಿದ ಸಮಸ್ತರೂ ಹಾಜರಿರಲೇ ಬೇಕಿತ್ತು. ಸಭಾಗ್ರಹದ ಮಧ್ಯದಲ್ಲೊಂದು ಸ್ಟೂಲ್. […]

ಕಳೆದರೆ’ಪುಸ್ತಕ ಸಂಥೆ’ ಯಲ್ಲಿ ಕಳೆದು ಹೋಗಬೇಕು

ಕಳೆದರೆ’ಪುಸ್ತಕ ಸಂಥೆ’ ಯಲ್ಲಿ ಕಳೆದು ಹೋಗಬೇಕು ನಮ್ಮ ತಂದೆ ಪುಸ್ತಕಪ್ರಿಯರು. ದಿನನಿತ್ಯದ ಕೆಲಸ ಮುಗಿಸಿ ಎಷ್ಟೇ ಸಮಯ ಸಿಗಲಿ ಕೈಯಲ್ಲಿ ಪುಸ್ತಕವಿರಲೇ ಬೇಕು. ಮನೆಗೆ ಯಾರೇ ಬರಲಿ ಉಭಯ ಕುಶಲೋಪರಿಗೂ ಮುನ್ನವೇ ಪುಸ್ತಕ ಪ್ರಸ್ತಾಪ… ಯಾವ ಹೊಸ ಪುಸ್ತಕ ಬಂದಿದೆ? ಯಾವುದಾದರೂ ಖರೀದಿಸಿದೆಯಾ? ಯಾವುದು ಇತ್ತೀಚೆಗೆ ಮುದ್ರನ ಕಂಡಿದೆಯಾ? ಮುಂತಾಗಿ ಪ್ರಶ್ನೆಗಳ ಸುರಿಮಳೆ… ಅಂದ ಮಾತ್ರಕ್ಕೆ ನಾವೆಲ್ಲ ಖರೀದಿಸಿಯೇ ಓದುತ್ತಿದ್ದೆವು ಎಂದಲ್ಲ… ನಮಗೆ ಆ ಯೋಗ್ಯತೆ ಎಳ್ಳಷ್ಟೂ ಇರಲಿಲ್ಲ. ನಮ್ಮ ತಂದೆಯ ಪ್ರಾಮಾಣಿಕ ಹುಚ್ಚಿಗೆ ಮನಸೋತು ಆಪ್ತರು, […]

We want space

We want space ನಾವು ಈಗಿರುವ ಮನೆಗೆ ಬಂದು ಮೂರು ವರ್ಷ, ಮೂರು ತಿಂಗಳುಗಳು. ಬರುವ ಮೊದಲೇ builders ಮನೆಯ ಹಿತ್ತಲಿನಲ್ಲಿ (ಮನೆಯ ಹಿಂಭಾಗದ ಖಾಲಿ ಜಾಗ) ಎಲ್ಲ ವಿಲ್ಲಾಗಳಲ್ಲಿಯೂ ಕೆಲವೊಂದು ಒಂದೇ ರೀತಿಯ ಗಿಡಗಳನ್ನು ನೆಟ್ಟಾಗಿತ್ತು. ಅವು ಯಾವುವು? ಯಾವ ರೀತಿಯಲ್ಲಿ ಬೆಳೆಯುತ್ತವೆ ಎಂಬ ಅಂದಾಜಿಲ್ಲದ ನಾವು ನಮಗೆ ಬೇಕಾದ ಕೆಲವು ಹೂವು, ಹಣ್ಣುಗಳ ಗಿಡಗಳನ್ನು ನಮ್ಮದೇ ಅಂದಾಜಿಲ್ಲಸ ನಾವು ನಮಗೆ ಬೇಕಾದ ಕೆಲವು ಹೂವು, ಹಣ್ಣುಗಲ ಗಿಡಗಳನ್ನು ನಮ್ಮದೇ ಅಂದಾಜಿನಲ್ಲಿ ಹಾಕಿಕೊಂಡಿದ್ದೆವು…ಕಳೆದ ಮೂರು ವರ್ಷಗಳ […]

ಕೆಲವಮ್ಮೆ ‘ಹೊಳೆಯದಿರುವದೂ’ ಚಿನ್ನವೇ

ಕೆಲವಮ್ಮೆ ‘ಹೊಳೆಯದಿರುವದೂ’ ಚಿನ್ನವೇ… ನಾವು ಈ ಮನೆಗೆ ಬಂದು ಮೂರು  ವರ್ಷಗಳಾಗಿದೆ… ಗಡಿಬಿಡಿಯಲ್ಲಿ shift   ಆದ ಕಾರಣ ಬಾಕಿ ಇದ್ದ ಕೆಲ ಚಿಕ್ಕ ಪುಟ್ಟ ಕೆಲಸಗಳಾಗಬೇಕಿತ್ತು.   Association  ನವರು  ಒಬ್ಬನನ್ನು  ಕರೆತಂದು ಇವನು ನಿಮ್ಮಲ್ಲ ಕೆಲಸ  ಮಾಡುತ್ತಾನೆ ಎಂದು ಪರಿಚಯಿಸಿ  ಹೊರಟು ಹೋದರು… ಅವನನ್ನು ನೋಡಿದಾಗ ನನಗೆ ತಟ್ಟನೇ ರವೀಂದ್ರನಾಥ ಟಾಗೋರರ ಕಕಾಬೂಲಿವಾಲಾ ನೆನಪಾದ …. ದೊಡ್ಡ ಆಕಾರ, ಸಡಿಲು ಬಟ್ಟೆ, ಮುಖ ಕಾಣದಷ್ಟು ಗಡ್ಡ, ಮೀಸೆ… ಸುಣ್ಣ ಬಣ್ಣದ ಕೆಲಸವಾದ್ದರಿಂದ ಆಗಲೇ ಸಾಕಷ್ಟು ಬಣ್ಣ ಬಣ್ಣಗಳಿಂದ […]