ಮಕ್ಕಳನ್ನು ಹೇಗೆ ಸಂಭಾಳಿಸಲಿ? ಮಕ್ಕಳ ಬೇಸಿಗೆಯ ರಜೆ ಬಂತು.. ಹೀಗೆಂದು ವಿಚಾರ ಮಾಡುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳ ಪರೀಕ್ಷೆಯಲ್ಲದ ಪರೀಕ್ಷೆ ಮುಗಿದಿದೆ. ರಿಜಲ್ಟ್ ಕೂಡ ಬಂದಾಯ್ತು. ಆದರೆ ಶಾಲೆ, ಪರೀಕ್ಷೆ ಇವೆಲ್ಲ ವೂ ನಿಗದಿತವಾಗಿ ನಡೆಯುತ್ತಿದ್ದಾಗ ಪಾಲಕರಿಗೆ ಚಿಂತಿಸುವ ಕಾರಣವಿರಲಿಲ್ಲ. ಆದರೆ ಈಗ ಶಾಲೆಗಳೂ ಸರಿಯಾಗಿ ನಡೆಯುತ್ತಲಿಲ್ಲ. ಆಫೀಸುಗಳೂ ಕೆಲವು ಪ್ರತ್ಯಕ್ಷ ಹಾಜರಿಯನ್ನು ಬೇಡಿದರೆ ಇನ್ನು ಕೆಲವು ಮನೆಯಿಂದಲೇ ಮಾಡಬಹುದು ಎಂಬ ರಿಯಾಯಿತಿಯನ್ನು ಕೊಟ್ಟಿವೆ. ಆದರೆ ಇಲ್ಲಿ ಸಮಸ್ಯೆ ಆಗಿರುವುದು ಶಾಲೆಗೆ ಹೋಗುವ […]
