ಮಕ್ಕಳು… ನಿಮ್ಮ ಮಕ್ಕಳು ನಿಮ್ಮವಲ್ಲ… ನಿಮ್ಮ ‘ಬಯಕೆ’ಯ ಕೂಸುಗಳು… ನಿಮ್ಮ ಮುಖಾಂತರ ಬಂದಿರಬಹುದು… ನಿಮಗಾಗಿಯೇ ಅಲ್ಲ, ನಿಮ್ಮ ಜೊತೆಗಿರಬಹುದು, ಆದರೂ ನಿಮ್ಮವರಲ್ಲ. ಅವರಿಗೆ ನಿಮ್ಮ ಪ್ರೀತಿ ಕೊಡಬಲ್ಲಿರಿ… ನಿಮ್ಮ ಯೋಚನೆಗಳನ್ನಲ್ಲ… ಅವರಿಗೆ ತಮ್ಮವೇ ವಿಚಾರಗಳುಂಟು. ನೀವವರ ಶರೀರಗಳಿಗೆ ಆಸರೆ ಕೊಡಬಲ್ಲಿರಿ…ಮನಸ್ಸುಗಳಿಗಲ್ಲ. ಅವರ ಆತ್ಮ/ ಮನಸ್ಸುಗಳು ಅವರ ‘ನಾಳೆ’ ಗಳಲ್ಲಿವೆ… ನೀವು ತಪ್ಪಿಯೂ ಕನಸಿನಲ್ಲಿಯೂ ಅವುಗಳನ್ನು ಮುಟ್ಟಲಾರಿರಿ. ಅವರಂತೆ ನಿಮಗೆ ಆಗಬೇಕೆನಿಸುವಷ್ಟು ಚಂದದ ಬದುಕು ಅವರದಾಗಬಹುದು. ಬದುಕೆಂದೂ ಹಿಮ್ಮುಖವಾಗಿ ಹರಿಯಲಾರದು, ಅದಕ್ಕೆ ಕಿಂಚಿತ್ತೂ ‘ನಿನ್ನೆ’ಯ ಹಂಗಿಲ್ಲ… ಮುಂದೆ ಚಿಮ್ಮುವ […]
