ಕುಮಾರವ್ಯಾಸ ಹಾಗೂ ಭಗವದ್ಗೀತೆ ಭಾಗ-೨ ವಿದುರನು ಧೃತರಾಷ್ಟ್ರನಿಗೆ ಹೇಳಿದ ನೀತಿಯಲ್ಲಿ ತಂದೆಯಾದವನೊಬ್ಬ ಮಗನನ್ನು ಬೆಳೆಸಬೇಕಾದ ಕ್ರಮ ಏನು ಎಂಬ ಅಂಶಗಳು ಕೂಡ ಅಡಕವಾಗಿವೆ. ಅದರ ಜೊತೆಗೇ ರಾಜನಾದವನು ಮಗನನ್ನು ಒಳ್ಳೆಯ ಕ್ರಮದಲ್ಲಿ ಬೆಳೆಸುವುದು ಎಷ್ಟು ಮುಖ್ಯ ಎಂಬುದನ್ನು ಸೂಚಿಸುತ್ತಾನೆ. ಸರಿಯಾದ ‘ಲಾಲನೆ’ ತಪ್ಪಿದಲ್ಲಿ ಮಕ್ಕಳು ಕೆಡುತ್ತಾರೆ ಎಂಬುದು ವಿದುರನ ವಿಚಾರ. ತನ್ನ ನೀತಿಯಲ್ಲಿ ಯಾರು ಯಾವುದರಿಂದ ಕೆಡುತ್ತಾರೆ ಎಂಬುದನ್ನು ಕುಮಾರವ್ಯಾಸನ ವಿದುರ ಹೇಳುವುದು ಹೀಗೆ- ಯತಿ ಕೆಡುಗು ದುಸ್ಸಂಗದಲಿ ಭೂ ಪತಿ ಕೆಡುಗು ದುರ್ಮಂತ್ರಿಯಲಿ ವರ ಸುತ […]
