ಮಣ್ಣಿನ ಮಕ್ಕಳ ಮಣ್ಣೆತ್ತಿನ ಹಬ್ಬ….! ಬಾಲ್ಯದ ಮಧುರ ನೆನಪುಗಳಲ್ಲಿ ಮಣ್ಣೆತ್ತಿನ ಹಬ್ಬದ ಸಂಭ್ರಮ ತುಂಬಾ ವಿಶಿಷ್ಟವಾದದ್ದು ಜೇಷ್ಠ ಬಹುಳ ಅಮಾವಾಸ್ಯೆಯನ್ನು ಬಸವನ ಅಮಾವಾಸ್ಯೆ ಮಣ್ಣೆತ್ತಿನ ಅಮಾವಾಸ್ಯೆ ಎಂದು ಮಲೆನಾಡು ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಶ್ರದ್ಧಾ-ಭಕ್ತಿಯೊಂದಿಗೆ ಆಚರಿಸಲಾಗುತ್ತದೆ. ಇದು ಮುಂಗಾರಿನ ಆರಂಭದ ಹಬ್ಬ. ಭೂಮಿಯನ್ನು ತಾಯಿಯೆಂದೇ ಪೂಜಿಸುವ ಪ್ರೀತಿಸಿ, ಗೌರವಿಸುವ ರೈತಾಪಿ ವರ್ಗದ ಮಹತ್ವದ ಆಚರಣೆ ತುಂಬಾ ವಿಶೇಷವಾದುದು. ವ್ಯವಸಾಯದ ಕಾರ್ಯಕ್ಕೆ ನೆರವು ನೀಡುವ ಎತ್ತುಗಳನ್ನು ಸಾಂಕೇತಿಕವಾಗಿ ಗೌರವಿಸುವುದು ಇದರ ಹಿಂದಿನ ಉದ್ದೇಶ. ಅಲ್ಲದೇ ಮಳೆ ಬೆಳೆ […]
