ಮತ್ತೆ ಯುಗಾದಿ ಬದಲಾವಣೆ ಎಂದರೆ ಹೊಸತು…, ಹೊಸತು ಎಂದರೆ ಸೌಂದರ್ಯ. ಸೌಂದರ್ಯ ಎಂದರೆ ಉಲ್ಲಾಸ. ಉಲ್ಲಾಸ ಅಂದರೆ ಬದುಕು… ಬದುಕು ಅಂದರೆ ಬದಲಾವಣೆ… ಎಲೆ ಉದುರಿದ ಮರ ಮತ್ತೆ ಚಿಗುರಿನಿಂದ ಕಂಗೊಳಿಸಲು ತಯಾರಾಗುತ್ತದೆ. ಮತ್ತೆ ಚಿಗುರನ್ನು ಎಲೆಯಾಗಿಸಿ, ಎಲೆ ಹಣ್ಣಾಗಿಸಿ, ಉದುರಿಸಿಕೊಳ್ಳಲೂ ಕೂಡಾ….. ಮತ್ತೆ, ಮತ್ತೆ ಯುಗಾದಿ. ಇದೇ ನಿಸರ್ಗ ಮಾನವ ಬದುಕಿಗೆ ಶಾಶ್ವತವಾಗಿ ನೀಡುತ್ತಿರುವ ಸಂದೇಶ ಹಾಗೂ ಸಂತೋಷ. ಇದು ಪ್ರಕೃತಿಯಲ್ಲಿ ನಿತ್ಯ ಪವಾಡದಂತೆ ನಡೆಯುತ್ತದೆ. ಪ್ರಕೃತಿಯು ಹಸುರಿನಿಂದ ಸಜ್ಜಾಗುವ ಈ ಸುಂದರ ಕ್ಷಣ ಯುಗಾದಿ. […]
