ಮಿಠಾಮಿ ಗೊಂಬೆ ಚಾಕೋಲೇಟ್ ಕುರುಕುರು ಲೇಸ್ ಗಳ ಅಬ್ಬರದಲ್ಲಿ ಹಿಂದೆ ಶಾಲೆ. ಸಂತೆಗಳ ಬಳಿ ಕಾಣಸಿಗುತ್ತಿದ್ದ ಮಿಠಾಯಿ ಗೊಂಬೆ ನೇವದ್ಯಕ್ಕೆ ಸರಿದಿದೆ. ಗೊಂಬೆಗೆ ಅಳವಡಿಸಿದ ಕೋಲಿನ, ವಿಶೇಷ ರುಚಿಯ ಈ ಮಿಠಾಯಿ ಇತ್ತೀಚೆಗೆ ರಾಜಾಜಿನಗರದ ರೇಣುಕಾಚಾರ್ಯ ಹೈಸ್ಕೂಲಿನ ಮುಂದೆ ಕಂಡು ಬಂದಿತು.ಮಿಠಾಯಿ ಗೊಂಬೆ ನೋಡುವುದೇ ಚಂದ ಅಲಂಕಾರ ಮಾಡಿದ ಮುದ್ದಾದ ಗೊಂಬೆಯನ್ನು ಕೋಲಿಗೆ ಸಿಕ್ಕಿಸಿ ಬಹುದೂರದವರೆಗೂ ಮಕ್ಕಳಗಮನ ಸೆಳೆಯಲು ಮಾಡಿಕೊಂಡ ತಂತ್ರಗಾರಿಕೆ ಯಂತೂ ಇನ್ನೂ ಆಸಕ್ತಿಕರ. ಗೊಂಬೆಯ ಕೈಯಲ್ಲಿ ರುವ ದೊಡ್ಡದಾದ ತಾಳಗಳಿಗೆ ಹೊಂದಿಕೊಂಡಂತೆ ಗೊಂಬೆಯ ಹಿಂಭಾಗದಲ್ಲಿರುವ […]
