Your Cart

Need help? Call +91 9535015489

📖 Print books shipping available only in India. ✈ Flat rate shipping

ಜಾತ್ರೆಯೆಂಬ ಮಾಯಾಲೋಕ

ಜಾತ್ರೆಯೆಂಬ ಮಾಯಾಲೋಕ ಜಾತ್ರೆ ಎಂದ ಕೂಡಲೇ ಕಣ್ಣಮುಂದೆ ಬರುವುದು ವರ್ಷಕೊಮ್ಮೆ ನಡೆಯೋ ನಮ್ಮೂರಿನ ಗಣಪತಿ ದೇವರ ಜಾತ್ರೆ. ಅದು ನಮಗೆ ವಿಶೇಷದಲ್ಲಿ ವಿಶೇಷ. ಜಾತ್ರೆಗಿನ್ನೂ ತಿಂಗಳಿರುವಾಗಲೇ “ ಏ… ಜಾತ್ರೆ ಬಂತು ಕಣೋ…!” ಅಂತ ಕಣ್ಣರಳಿಸುತ್ತಲೇ ಎದುರಾದವರೊಂದಿಗೆ ಮಾತು ಮೊದಲಾಗುತ್ತಿತ್ತು. ಆಗ ಮೈಯಲ್ಲಿ ಆವಾಹನೆಯಾಗುವ ಗೆಲುವು, ಖುಷಿ, ಸಂಭ್ರಮ ಹೇಳುವುದೇ ಬೇಡ. ಮಜವೋ ಮಜ…! ಒಂದು ವಾರಕ್ಕಿಂತಲೂ ಹೆಚ್ಚು ನಡೆಯುವ ಈ ಜಾತ್ರೆ ಊರವರ ಪಾಲಿಗೆ ಒಂದು ದೊಡ್ಡ ಹಬ್ಬದಂತಯೇ ಮನೆಗೆ ನೆಂಟರಿಷ್ಟರು, ಸಂಬಂಧಿಕರ ಆಗಮನದಿಂದ ಸಂತಸ […]

ಜ್ಞಾನದ ಬೆಳಕು…..

ಜ್ಞಾನದ ಬೆಳಕು….. ಒಮ್ಮೆ ರಮಣ ಮಹರ್ಷಿಗಳ ಬಳಿಗೆ ಬಂದ ಒಬ್ಬ ವ್ಯಕ್ತಿ. ರಮಣರ ಕಾಳಿಗೆ ಬಿಕ್ಕಿ ಬಿಕ್ಕಿ ಅಳುತ್ತ, ಜೀವನದಲ್ಲಿ ತುಂಬ ನೊಂದಿರುವುದಾಗಿಯೂ, ಯಾವ ಕೆಲಸವೂ ಕೈ ಹತ್ತದೇ ಸೋತು ಸುಣ್ಣವಾಗಿರುವೆನೆಂತಲೂ ಬದುಕುವ ದಾರಿ ಕಾಣದೇ ನೊಂದಿರುವ ದಾರಿ ಎಂದು ರೋದಿಸುತೊಡಗಿದ. ಸಂಸಾರದ ತಾಪತ್ರಯದಲ್ಲಿ ನೊಂದು ಬೆಂದು ಆ ವ್ಯಕ್ತಿ, ಸಾವೇ ತನ್ನ ಮುಂದಿನ ದಾರಿ ಎಂದು ರಮಣರಲ್ಲಿ ತನ್ನ ಸಂಕಟ ತೋಡಿಕೊಳ್ಳುತ್ತಿರುವ ಆ ವೇಳೆಯಲ್ಲಿ ಮಹರ್ಷಿಗಳು ಊಟದ ಎಲೆಯನ್ನು ಜೋಡಿಸುತ್ತಿದ್ದರಂತೆ ಶಾಂತ ಚಿತ್ತದಿಂದ ಆತನ ಮಾತುಗಳನ್ನು […]

ಬಾವಿಗಳಿಗೆ ಕಾಯಕಲ್ಪ…!

ಬಾವಿಗಳಿಗೆ ಕಾಯಕಲ್ಪ…! ನೀರಿನ ಸೌಕರ್ಯ ಒದಗಿಸುವವನನನ್ನು ಪುಣ್ಯಾತ್ಮ ಎನ್ನುತ್ತೇವೆ. ಬಿರುಬೇಸಗೆಯಲ್ಲಿ ದಾಹವನ್ನು ತಣಿಸಿದರೆ ಅಶ್ವಮೇಧ ಯಾಗ ಮಾಡಿದ ಮಹಾಫಲವಂತೆ ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ… ಮಾಡಿಸು ಎಂದು ಮುಂತಾಗಿ ಒಳ್ಳೆಯ ಕೆಲಸಗಳನ್ನೇ ಮಾಡಬೇಕೆಂಬ ಪಾಠ ಹಿಂದೆ ಎಳವೆಯಲ್ಲೇ ಬೋಧನೆಯಾಗುತ್ತಿತ್ತು ಆದರೆ ಇಂದು…? ಆಯಾ ಊರಿನಲ್ಲಿ ನೀರಿನ ಉಗ್ರಾಣಗಳಂತಿದ್ದ ಕೆರೆ, ಬಾವಿಗಳಿಂದು ಹಾಳು ಬಿದ್ದು ಕಸದ ತೊಟ್ಟಿಗಳಾಗಿವೆ. ಕೊಳವೆ ಬಾವಿಗಳ ಅಬ್ಬರದಲ್ಲಿ ತೆರೆದ ಬಾವಿಗಳನ್ನು ಮರೆತೇಬಿಟ್ಟಿದ್ದೇವೆ. ಒಂದು ಕಾಲದಲ್ಲಿ ಅಂತರ್ಜಲ ಕಾಪಾಡುತ್ತಿದ್ದ, ಮಳೆ ನೀರು ಸಂಗ್ರಹಿಸುತ್ತಿದ್ದ ತೆರೆದ […]

ಕೋಲೆ ಬಸವ…!

ಕೋಲೆ ಬಸವ…! ಆಧುನಿಕತೆಯ ಭರಾಟೆಯಿಂದಾಗಿ ನೇಪಥ್ಯಕ್ಕೆ ಸರಿಯುತ್ತಿರುವ ಅನೇಕ ಜಾನಪದ ಆಟಗಳು ಹಾಗೂ ಕಲೆಗಳಲ್ಲಿ ಕೋಲೆ ಬಸವನ ಆಟ ಒಂದು. ಕೋಲೆ ಬಸವ ನೋಡಲು ಬಹಳ ಸುಂದರ. ಅವುಗಳ ಭುಜಗಳನ್ನು ಎತ್ತರವಾಗಿ ಕಾಣುವಂತೆ ಬಣ್ಣ ಬಣ್ಣದ ಜೂಲುಗಳಿಂದ ಅಲಂಕಾರ ಮಾಡಿ, ಕೋಡಿನ ತುದಿಗೆ ಬಣ್ಣದ ರಿಬ್ಬನ್ ಗಳನ್ನು ಕಟ್ಟಿ ಸಿಂಗರಿಸುತ್ತಾರೆ. ಕಾಲುಗಳಿಗೆ ಗಗ್ಗರ, ಹಣೆಗೆ ದೇವರ ಪಟದೊಂದಿಗೆ ಕವಡೆ ಸರದ ಅಲಂಕಾರ. ಈ ರೀತಿ ಶೃಂಗಾರಗೊಂಡ ಗೋವುಗಳು ತಮ್ಮ ಯಜಮಾನನ ಅಣತಿಯಂತೆ ವಿವಿಧ ಆಟಗಳನ್ನು ಪ್ರದರ್ಶಿಸುತ್ತಾ ನೆರೆದ […]

ಮರದ ಮನೆ…!

ಮರದ ಮನೆ…! ಪ್ರಕೃತಿಯ ಮಡಿಲಲ್ಲಿ ಮರದ ಮೇಲಿನ ಮನೆಯನೇರಿ ಕಾಲ ಕಳೆಯುವುದು ಅದ್ಭುತ ಅನುಭವ. ಹಕ್ಕಿಗಳ ಚಿಲಿಪಿಲಿ ನಾದದ ಜೊತೆಗೆ ತಂಪಾದ ಗಾಳಿ, ಬೆಳದಿಂಗಳು, ಸೂಯೋದಯದ ಸೊಬಗಿನ ಕ್ಷಣವನ್ನು ಮನದಣಿಯೆ ಆಸ್ವಾದಿಸಲು ಮರದ ಮನೆ ಹೆಚ್ಚು ಸೂಕ್ತ. ಅಪರೂಪ ಎನ್ನುವಂತಿರುವ ಇದು ತನ್ನ ವಿಶೇಷ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಈ ಟ್ರೀ ಹೌಸ್ ಇರುವುದು ಶಿಕಾರಿಪುರದಿಂದ ಮೂರು ಕಿಲೋಮೀಟರ್ ದೂರದ ಇಕ್ಬಾಲ್ ಅಹಮದ್ ರವರ ತೋಟದ ಮನೆಯಲ್ಲಿ ನಟರೂ ನಾಟಕಕಾರರೂ ಆಗಿರುವ ಇವರ ಕೈ ಚಳಕದಿಂದ ಹಸಿರ […]

ಆರೋಗ್ಯವರ್ಧಕ ಕೆಂಪು ಬಾಳೆ…!

ಆರೋಗ್ಯವರ್ಧಕ ಕೆಂಪು ಬಾಳೆ…! ಪ್ರಪಂಚದಲ್ಲಿ ಹೆಚ್ಚು ಸೇವಿಸುವ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡಾ ಒಂದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ಪರಿಪೂರ್ಣ ಆಹಾರಕ್ಕೆ ಸುಮನಾಗಿರುವುದೂ ಹೌದು. ಒಂದು ಸಂಶೋಧನೆಯ ಪ್ರಕಾರ ತೊಂಭತ್ತು ನಿಮಿಷಗಳ ಶ್ರಮದಾಯಕ ಕೆಲಸಕ್ಕೆ ಬೇಕಾಗುವ ಶಕ್ತಿಯನ್ನು ಪೂರೈಸಲು ಕೇವಲ ಎರಡು ಬಾಳೆಹಣ್ಣುಗಳು ಸಾಕಂತೆ. ಕಾರಣ ಇದರಲ್ಲಿ ಶಕ್ತಿಯ ಜೊತೆಗೆ ನಾರಿನಂಶ ಹಾಗೂ ಮೂರು ವಿಧದ ಪ್ರಾಕೃತಿಕ ಸಕ್ಕರೆಗಳಿವೆ ಕಡಿಮೆ ಬೆಲೆಯಲ್ಲಿ ಅಧಿಕ ಪೌಷ್ಟಿಕಾಂಶವನ್ನು ಕೊಡುವ ಜನಪ್ರಿಯ ಹಣ್ಣು ಎಂದರೆ ಅದು ಬಾಳೆಹಣ್ಣು. ಸಾಮಾನ್ಯವಾಗಿ ಬಾಳೆ ಹಣ್ಣು ಎಂದ […]

ಮಿಸ್ರಿ ಜೇನು….!

ಮಿಸ್ರಿ ಜೇನು….! ಜೇನು ತುಪ್ಪ ಸಂಗ್ರಹಿಸುವ ಜೇನ್ನೊಣಗಳಲ್ಲಿ ಮಿಸ್ರಿ ಜೇನು ಇತರ ಪ್ರಭೇದಗಳಿಗಿಂತ ತೀರಾ ಚಿಕ್ಕದು. ಅತ್ಯಂತ ಗೌಪ್ಯ ಸ್ಥಳಗಳಾದ ಕಲ್ಲಿನ ಸಂದುಗಳು, ಮಣ್ಣಿನ ಗೋಡೆ, ಮರದ ಪೊಟರೆಗಳು ಮತ್ತು ಹಳೆಯ ದೇವಸ್ಥಾನದ ಕಲ್ಲ ಪಡಕುಗಳಲ್ಲಿ ಗೂಡು ಮಾಡಿಕೊಂಡು ಆರೋಗ್ಯದಾಯಕ ಔಷಧಯುಕ್ತ ಜೇನು ನೀಡುವ ಈ ಜೇನು, ಕೊಂಡಿಯಿಲ್ಲದ ಜೇನು, ಗಲಾಟೆ ಇಲ್ಲದೆ ಶಾಂತಿಯಿಂದ ಬದುಕುವ ಈ ಜೇನು ಹುಳುಗಳು ತಮ್ಮ ಗೂಡನ್ನು ಮೇಣದಿಂದ ಮುಚ್ಚಿ, ಎಲ್ಲಿಯೂ ಬೆಳಕು- ಗಾಳಿ ಬರದಂತೆ ಕತ್ತಲ ಕೋಣೆಯಲ್ಲಿ ಜೀವನ ಮಾಡುತ್ತವೆ. […]

ಕಲಾವಿದೆಯ ಕೈಚಳಕ

ಕಲಾವಿದೆಯ ಕೈಚಳಕ ಕೆಲವು ಸಮುದಾಯದ ಮದುವೆ, ವರಪೂಜೆಯ ಕಾರ್ತಕ್ರಮಗಳಲ್ಲಿ ನಡೆಯುವ ಶಾಸ್ತ್ರಗಳಲ್ಲಿ ಬಾಗಿನ ಅಥವಾ ಆರತಿ ತಟ್ಟೆಯ ಜೊತೆಗೆ ಕೆಲವು ಅಲಂಕಾರಿಕ ವಸ್ತುಗಳನ್ನು ಇಡುವುದನ್ನು ಕಾಣಬಹುದು. ಇಂತಹ ಬಗೆ ಬಗೆಯ ಅಲಂಕಾರಿಕ ವಸ್ತುಗಳನ್ನು ವಧು ಅಥವಾ ವರನ ಕಡೆಯವರೇ ಸ್ವತಃ ಕೈಯಿಂದ ತಯಾರಿಸಿಡುತ್ತಾರೆ. ಹಿಂದಿನ ಕಾಲದಲ್ಲಿ ಹಳ್ಳಿಗಾಡಿನಲ್ಲಿರುವವರಿಗೆ ತಮ್ಮ ಕಲೆಗಾರಿಕೆಯನ್ನು ಪ್ರದರ್ಶಿಸುವ ವೇದಿಕೆಗಳು ಇರಲಿಲ್ಲ. ಮದುವೆ, ಮುಂಜಿ, ಹಬ್ಬಗಳ ಸಮಯದಲ್ಲಿ ನಡೆಯುವ ಕಾರ್ಯಕ್ರಮಗಳು ಇವರಲ್ಲಿ ಸುಪ್ತವಾಗಿದ್ದ ತಮ್ಮ ಕಲೆಗಾರಿಕೆಯನ್ನು ಹೊರ ಜಗತ್ತಿಗೆ ತೋರಿಸಲೂ ಪ್ರದರ್ಶಿಸಲೂ ಅವಕಾಶ ಒದಗಿಸುತ್ತಿದ್ದವು. […]

ಕೂರ್ಮಾಸನ

ಕೂರ್ಮಾಸನ ಮಣೆಗಳ ಮೇಲೆ ಕೂರುವ ಅಭ್ಯಾಸವೇ ಕಡಿಮೆಯಾಗಿರುವಾಗ ಮುಖ ನೋಡಿ ಮಣೆ ಹಾಕುವ ಗಾದೆಯೂ ನೇಪಥ್ಯಕ್ಕೆ ಸರಿಯುತ್ತಿದೆ. ಇಷ್ಟಕ್ಕೂ ಮಣೆ ಕೂರುವ ಆಸನ ಮಾತ್ರವಲ್ಲ, ಅದು ನಮ್ಮ ಸಾಮಾಜಿಕ ಸ್ಥಾನಮಾನಗಳನ್ನೂ ತೋರುತ್ತಿತ್ತು. ಗುರುಗಳಿಗೆ ಕೊಡುವ ಮಣೆ ಯಾವಾಗಲೂ ಎತ್ತರವಾಗಿರುತ್ತಿತ್ತು. ಗುರುಗಳಿಗೆ ಕೊಡುವ ಮಣೆ ಯಾವಾಗಲೂ ಎತ್ತರವಾಗಿರುತ್ತಿತ್ತು. ಮದುಮಕ್ಕಳು ಕೂರುವ ಮಣೆ ಗಾತ್ರದಲ್ಲಿ ಡಬಲ್ ಆಗಿರುತ್ತಿತ್ತು. ಹುಲಿಚರ್ಮದ ಹಾಸು ತ್ಯಾಗ ಮತ್ತು ವಿರಕ್ತಭಾವವನ್ನು ಸೂಚಿಸುತ್ತಿತ್ತು. ಹಾಗೆಯೇ ಆಮೆಯ ಆಸನವೂ ಒಂದಿದೆ. ಇದು ಸಂಸಾರದಲ್ಲಿದ್ದೂ, ಮನದಲ್ಲಿ ವಿಷ್ಣುವಿನ ಜಪವನ್ನು ಮಾಡುವ […]