Your Cart

Need help? Call +91 9535015489

📖 Print books shipping available only in India. ✈ Flat rate shipping

ಪರಿಸರ ಸ್ನೇಹಿ ಆಟಿಕೆ

ಪರಿಸರ ಸ್ನೇಹಿ ಆಟಿಕೆ…! ಮಗುವಿನ ದೊಡ್ಡ ಪ್ರಪಂಚವೇ ಆಟಿಕೆ. ಹಿಂದೆ ಮಕ್ಕಳ ಆಟಿಕೆಗಳು ಹೆಚ್ಚಾಗಿ ಕಟ್ಟಿಗೆ, ಕಲ್ಲುಗಳಿಂದ ತಯಾರಾದಂತಹ ಆಟಿಕೆಗಳೇ ಆಗಿದ್ದವು. ಇಲ್ಲಿ ಕಾಣುವ ಆಟಿಕೆಗಳು ಅಪರೂಪವೇ ಆಗುತ್ತಿರುವ ನಮ್ಮದೇ ನೆಲದ ಸೃಷ್ಟಿಯಾದ ಬಳಪದ ಕಲ್ಲಿನ ಆಟಿಕೆಗಳು. ಪರಿಸರ ಸ್ನೇಹಿಯಾದ ಇಂತಹ ಆಟಿಕೆಗಳನ್ನು ಮರೆತು ಈಗ ನಾಔಉ ಚೀನಾ, ಜಪಾನ್ ನಿರ್ಮಿತ ಪ್ಲಾಸ್ಟಿಕ್ ಆಟಿಕೆಗಳನ್ನು ತಂದು ಕೊಟ್ಟು ಸಂಭ್ರಮಿಸುತ್ತಿದ್ದೇವೆ. ಪ್ಲಾಸ್ಟಿಕ್ ಲೋಹಗಳಿಂದ ತಯಾರಾದ ಆಟಿಕೆಗಳಲ್ಲಿ ಮಗುವಿನ ಆರೋಗ್ಯಕ್ಕೆ ಮಾರಕವಾದ ರಾಸಾಯನಿಕಗಳಿರುತ್ತವೆಂದು ತಿಳಿದು ಬಂದಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸರಕಾರವು […]

ದೀಪದ ಮಲ್ಲಿ

ದೀಪದ ಮಲ್ಲಿ ಕಂಚಿನಿಂದ ತಯಾರಾದ ಈ ‘ದೀಪದ ಮಲ್ಲಿ’ ಗೆ ಈಗ ಶತಮಾನದ ಸಂಭ್ರಮ. ನಾಲ್ಕೂವರೆ ಇಂಚು ಎತ್ತರವಿರುವ ಈ ದೀಪದ ಕಂಬ ಚಿಕ್ಕದಾದರೂ ಶಿಲ್ಪಿಯ ಕೌಶಲ್ಯ, ಸೃಜನಶೀಲತೆಯಿಂದಾಗಿ ಗಮನ ಸೆಳೆಯುತ್ತದೆ. ದೇವರ ಮುಂದೆ ದೀಪ ಬೆಳಗಲು ಬಳಕೆಯಾಗುತ್ತಿದ್ದ ಈ ಮೂರ್ತಿಯ ಕುಸುರಿ ಕೆಲಸದ ನಾಜೂಕು ಗಮನಿಸುವಂತಹದ್ದು. ಇದರ ವಿಶೇಷತೆಯೆಂದರೆ- ಚಿಕ್ಕ ಮೂರ್ತಿಯಲ್ಲೂ ನೀಳ ಹೆರಳು, ಹೆರಳಿಗೆ ಸಿಕ್ಕಿಸಿದ ಜಡೆ ಬಿಲ್ಲೆಗಳು, ಕೈ ಬಳೆ, ಕಂಠಾಭರಣ, ತೋಳುಬಂದಿ, ಕರ್ಣಾಭರಣವಲ್ಲದೇ ಸೊಂಟಪಟ್ಟಿ, ಕಾಲಂದುಗೆ, ನೀಟಾಗಿ ಕೊರೆದ ಸೀರೆಯ ನೆರಿಗೆ, […]

ಯಾರು ಬರುವರೋ

ಯಾರು ಬರುವರೋ….! ಎದೆಯ ಕದವನು ಸರಿಸಿ ಸ್ವಲ್ಪವೇ ಮೆಲ್ಲ ನೀ ಅಡಿ ಇಟ್ಟಿಯೇ ಅಮರಿಕೊಂಡಿಹ ಕತ್ತಲೆಲ್ಲವು ಚದುರಿ ಹೋಯಿತು ನೀ ಸುರಿಸಿಹ ಬೆಳಕಿಗೆ ॥ ಪ್ರಖರವಾಗಿಹ ನಿನ್ನ ಬೆಳಕಲಿ ಬದುಕು ಮುಂದಡಿ ಇಟ್ಟಿದೆ, ಕವಲು-ತಿರುವನು ದಾಟಿ ಮುಂದಕೆ ಬದುಕು ಸಾಗಿದೆ ಮನ ಮರೆಸುತಾ ಜೀವದಾ ಮಧು ಹೀರುತಾ ॥ ಮನದ ನೆಮ್ಮದಿ ಸ್ಥಿರಗೊಳುವ ಮುನ್ನವೆ ಮರುಕ ತೋರದೆ ಹೊರಟಿಹೆ ಕದವ ಮುಚ್ಚಿ ಇಳಿದು ಹೋದೆ ತೊರೆದು ಎನ್ನಯ ಪ್ರೀತಿಯ ಹೇಳದೇ ಇನಿತೂ ಕಾರಣ..! ॥ ಹೊರಗೆ ಬೆಳಕು […]

ಮುಖವಾಡ

ಮುಖವಾಡ ! ಬದುಕಿನ ಈ ಅನಂತ ಯಾತ್ರೆಯಲಿ ಗುರುತು ವಿಳಾಸಗಳ ಲಗ್ತಿಸಬೇಕೆಂದರೂ ಲಗ್ತಿಸುವುದಾದರೂ ಹೇಗೆ?   ದಿನವೂ ಬದಲಾಯಿಸಲೇ ಬೇಕಾದ ಮುಖವಾಡಗಳಲಿ ಅಸಲಿ ಮುಖದರ್ಶನವ ಗುರುತಿಸಲಿ ಹೇಗೆ? ಕಾಲಿಗೆ ಚಕ್ರ ಕಟ್ಟಿದಂತೆ ತಿರುಗಲೇಬೇಕಾದ ಈ ಇಳೆಯೊಳಗೆ ಒಂದೆಡೆ ನಿಂತೆನಾದರೂ ಹೇಗೆ? ಸುತ್ತ ಗಿರಕಿ ಹೊಡೆಯುತ ನಿತ್ಯ ಬದಲಾಗುವೀ ನೂರೆಂಟು ಇಸಂಗಳ ಮಧ್ಯದಲಿ, ಒಂದನೇ ಅಪ್ಪಿಕೂರುವುದಾದರೂ ಹೇಗೆ? ಹೊಸ್ಮನೆ ಮುತ್ತು

ಮತ್ತೆ ಯುಗಾದಿ

ಮತ್ತೆ ಯುಗಾದಿ ಬದಲಾವಣೆ ಎಂದರೆ ಹೊಸತು…, ಹೊಸತು ಎಂದರೆ ಸೌಂದರ್ಯ. ಸೌಂದರ್ಯ ಎಂದರೆ ಉಲ್ಲಾಸ. ಉಲ್ಲಾಸ ಅಂದರೆ ಬದುಕು… ಬದುಕು ಅಂದರೆ ಬದಲಾವಣೆ… ಎಲೆ ಉದುರಿದ ಮರ ಮತ್ತೆ ಚಿಗುರಿನಿಂದ ಕಂಗೊಳಿಸಲು ತಯಾರಾಗುತ್ತದೆ. ಮತ್ತೆ ಚಿಗುರನ್ನು ಎಲೆಯಾಗಿಸಿ, ಎಲೆ ಹಣ್ಣಾಗಿಸಿ, ಉದುರಿಸಿಕೊಳ್ಳಲೂ ಕೂಡಾ….. ಮತ್ತೆ, ಮತ್ತೆ ಯುಗಾದಿ. ಇದೇ ನಿಸರ್ಗ ಮಾನವ ಬದುಕಿಗೆ ಶಾಶ್ವತವಾಗಿ ನೀಡುತ್ತಿರುವ ಸಂದೇಶ ಹಾಗೂ ಸಂತೋಷ. ಇದು ಪ್ರಕೃತಿಯಲ್ಲಿ ನಿತ್ಯ ಪವಾಡದಂತೆ ನಡೆಯುತ್ತದೆ. ಪ್ರಕೃತಿಯು ಹಸುರಿನಿಂದ ಸಜ್ಜಾಗುವ ಈ ಸುಂದರ ಕ್ಷಣ ಯುಗಾದಿ. […]

ಅವಲಕ್ಕಿ ಮೊಸರು ಮತ್ತ ಸುಬ್ಬಣ್ಣ

ಅವಲಕ್ಕಿ ಮೊಸರು ಮತ್ತ ಸುಬ್ಬಣ್ಣ ಸುಬ್ಬಣ್ಣ ನಮ್ಮ ಕಥಾನಾಯಕ. ಆತ ಮನೆಗೆ ಬಂದರೆ, ಎದುರಲ್ಲಿ ಕಂಡರೆ “ಸು” ತೆಗೆದರೆ “ಬಣ್ಣ” “ಬ” ತೆಗೆದರೆ “ಸುಣ್ಣ” ಇವ ನಮ್ಮ ಸುಬ್ಬಣ್ಣ ಅಂತ ರಾಗವಾಗಿಯೇ ಹಾಡಿ ಸ್ವಾಗತಿಸುತ್ತಿದ್ದೆವು. ಇಂತಿಪ್ಪ ಸುಬ್ಭಣ್ಣನಿಗೋ, ಅವಲಕ್ಕಿ –ಮೊಸರು ತಿನ್ನುವುದೆಂದರೆ ಪಂಚಪ್ರಾಣ, ಅಮ್ಮನಲ್ಲಿ ಹುಸಿಕೋಪ ತೋರಿಯೋ, ಕುಂಟು ನೆಪ ಹೇಳಿಯೋ ದಿನಕ್ಕೊಮ್ಮೆಯಾದರೂ ಅವಲಕ್ಕಿ –ಮೊಸರು ತಿನ್ನದಿದ್ದರೆ ಏನೋ ಕಳಕೊಂಡ ಚಡಪಡಿಕೆ. ಕಾಲನುಕಾಲಕ್ಕೆ ತಾಂ ಅಂತ ಹೇಳುತ್ತಾರಲ್ಲ ಹಾಗೆ ಯಾರ್ಯಾರಿಗೋ ಎಲ್ಲೆಲ್ಲೋ ಲಕ್ಕು ಹೊಡೆದು ಮಂತ್ರಿ ಮಹಾಮಂತ್ರಿ […]

ಸೂರಕ್ಕಿ

ಸೂರಕ್ಕಿ (ಸನ್‌ ಬರ್ಡ್‌) ನಮ್ಮ ಮನೆಯ ಅಂಗಳಕ್ಕೆ ದಿನವೂ ಮುಂಜಾನೆ ದಾಳಿ ಇಡುವ ಸೂರಕ್ಕಿ(ಸನ್‌ ಬರ್ಡ್‌)ಗಳು, ದಾಸವಾಳ, ರತ್ನಗಂಧಿ ಹೂವಿನ ದೇಹದೊಳಗೆ ಸ್ಟ್ರಾನಂತಹ ತನ್ನ ಕೊಕ್ಕನ್ನು ಇಳಿಸಿ ‘ಸುರ್‌! ಸುರ್‌!’ ಎಂದು ಕ್ಷಣಾರ್ಧದಲ್ಲಿ ಮಧು ಹೀರಿ, ಅವಸರವಸರವಾಗಿ ಇನ್ನೊಂದು ಗಿಡದ ಹೂವಿನತ್ತ ಪುಸಕ್ಕನೇ ಜಾರಿ ಅಲ್ಲಿಯೂ ಮಧುಪಾನಗೈಯುವುದರಲ್ಲಿ ಬ್ಯುಸಿಯಾಗಿಬಿಡುತ್ತವೆ. ಈ ಹಕ್ಕಿಗಳು ಭಾರೀ ಕ್ರಿಯಾಶೀಲತೆಯಿಂದ ಅಂಗಳದೆಲ್ಲ ಹೂವಿನ ಮಕರಂದವನ್ನು ಹೀರಿ ಹೊಟ್ಟೆ ತುಂಬಿಸಿಕೊಳ್ಳುವ ಪರಿ ನೋಡುವುದೇ ಚೆಂದ. ಬಹಳಷ್ಟು ಸಲ ಎಲೆಯನ್ನೋ ಪಕ್ಕದ ಹೂವನ್ನೋ ಆಸರೆಯಾಗಿರಿಸಿಕೊಂಡು ಸರ್ಕಸ್ […]

ಸಹಜ ಕೃಷಿ

ಸಹಜ ಕೃಷಿ….! ಬದುಕಿಗೂ…. ಭೂಮಿಗೂ….!! ಇಳೆಗೂ… ಇಹಕ್ಕೂ….!! ಸಹಜ ಕೃಷಿ…! ಭೂಮಿ ಬಗೆಯುತ್ತಾ ಹೋದಂತೆ ನೇಗಿಲು ಆಳದಿಂದ ಮೇಲೆದ್ದ ಮಣ್ಣು ಎರೆಡೂ ಬದಿಗೆ ಹೊರಳಿ ಹೊರ ವಾತಾವರಣಕ್ಕೆ ಅನಾವರಣಗೊಳ್ಳುತ್ತಾ, ಹೊಸ ಚೇತನದ ನಿರ್ಮಿತಿಗೆ ಜೀವ ತಳೆವಂತೆ, ಬಯಕೆಗಳೇ ಬಲೆಯಾಗಿ ಬಿಗಿಗೊಂಡ ಮನವನುತ್ತುತ್ತ ಅಷ್ಟಷ್ಟೇ ಉತ್ಸಾಹ, ಸ್ಪೂರ್ತಿ, ನಂಬಿಕೆ, ಕನಸುಗಳ ಬೀಜಬಿತ್ತಿ ದಿಗಿಲು, ಹಠ, ಗೊಂದಲ, ನಿರಾಶಾಭಾವಗಳ ಕಳೆಕಿತ್ತು ಮನದ ತಿಳಿ-ಬಿಳಿಯ ಕಳೆಯದೇ ಭಾವನಾತ್ಮಕ ಸೆಲೆ ಚಿಮ್ಮುವ ನೈಸರ್ಗಿಕ ಕೃಷಿಯು ಒಡಮೂಡಿ ಬರಲಿ…! -ಹೊಸ್ಮನೆ ಮುತ್ತು.

‘ವಾಕಿಂಗ್ ಸ್ಟಿಕ್’

‘ವಾಕಿಂಗ್ ಸ್ಟಿಕ್’ ಮೇಲು ನೋಟಕ್ಕೆ ಹುಲ್ಲು ಕಡ್ಡಿಯಂತೆ ಕಾಣುವ ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗಷ್ಟೇ ಗೊತ್ತಾಗುವುದು ಇದು ಬರೀ ಒಣಹುಲ್ಲು ಕಡ್ಡಿಯಲ್ಲವೆಂದು. ‘ವಾಕಿಂಗ್ ಸ್ಟಿಕ್’ ಎನ್ನುವ ಈ ಕೀಟ ಚಲಿಸಿದಾಗಷ್ಟೇ ಜೀವವಿದೆಯೆಂದು ಗೊತ್ತಾಗುತ್ತದೆ. ಕದಲದೇ ನಿಂತಾಗ ಇದು ಒಣಹುಲ್ಲೇ ಸರಿ. ಮೂರು ಜೋಡಿ ಕಾಲುಗಳು, ಸಂಯುಕ್ತ ಕಣ್ಣುಗಳು ಮತ್ತು ಒಂದು ಜೋಡಿ ಆಂಟೆನಾ ಹೊಂದಿರುವ ಈ ಕಡ್ಡಿಕೀಟ ಹಸಿರಿನೊಂದಿಗೆ ಹಸಿರಾಗಿ, ಒಣಹುಲ್ಲಿನೊಂದಿಗೆ ಒಣಹುಲ್ಲಾಗಿ ಬಿಡುವ ರಕ್ಷಣಾ ತಂತ್ರ ಅನುಸರಿಸುವುದು ನಿಜಕ್ಕೂ ಅಚ್ಚರಿ. ಹಲವು ಜೀವ ಸಂಕುಲದ ನೆಲೆಬೀಡಾಗಿರುವ ಪಶ್ಚಿಮಘಟ್ಟದಲ್ಲಿ […]