ಮುಖಾ-ಮುಖಿ ( ನಾ ಮೆಚ್ಚಿದ ಇಂಗ್ಲಿಷ ಕವಿತೆಯೊಂದರ ಅನುವಾದ __ನನ್ನಿಂದ..) ಮನದಾಳದ ಕತ್ತಲಿನಲ್ಲಿ ದಿನದಿನಕ್ಕೆ ಕೊನೆಯುಸಿರೆಳೆವ ನನ್ನಂತರಂಗದ ಸಾಕ್ಷಿ ಪ್ರಜ್ಞೆಗೆ ಆಗಾಗ ಮುಖಾಮುಖಿಯಾಗುತ್ತೇನೆ. ಸುಸಜ್ಜಿತ, ಐಷಾರಾಮಿ ಹೊಟೆಲ್ಗಳಲ್ಲಿ ಬಾಗಿಲು ತೆರೆದು ಸ್ವಾಗತಿಸಿದ ಬಂಟನ ತಿಂಗಳವೇತನದಷ್ಟು ಮೊತ್ತವನ್ನು ಟೇಬಲ್ಮೇಲೆ ಇಟ್ಟು ಬರುವಾಗ… ತರಕಾರಿ ಪೇಟೆಯಲ್ಲಿ ಅಪ್ಪನ ಜೊತೆಯಲ್ಲಿ ಕುಳಿತು ನಗುನಗುತ್ತ ತರಕಾರಿ ತೂಗುವ ಚಿಣ್ಣನೊಬ್ಬ ತನ್ನ ಶಾಲಾದಿನಗಳಾಗ- ಬಹುದಾಗಿದ್ದ ಹಗಲುರಾತ್ರಿಗಳನ್ನು ಬಯಲಿನಲ್ಲಿ ಕರಗಿಸು- ವದನ್ನು ಕಂಡಾಗ… ಕೂಡುರಸ್ತೆಯಲ್ಲಿ ದಾಟಿಹೋಗುತ್ತಿರುವ ಹೆಣ್ಣಮಗಳೊಬ್ಬಳು ಮೈಮುಚ್ಚಿ ಮರ್ಯಾದೆಯುಳಿಸಿ- ಕೊಳ್ಳಲು ಹರಕು ಸೀರೆಯನ್ನು ಹಿಂದೆಮುಂದೆ […]
