ಮುಂಗಾರು ಮಳೆ ಹನಿಗಳ ಲೀಲೆ…! ಸುರಿವ ಮಳೆ ಕಂಡಾಗ ನೆನಪಿನ ಪರದೆಯಲ್ಲಿ ಬಾಲ್ಯ ಸುರುಳಿ ಬಿಚ್ಚಿಕೊಳ್ಳುತ್ತದೆ. ಮಲೆನಾಡಿನಲ್ಲಿ ಮಳೆಗಾಲವೆಂದರೆ ಪ್ರಕೃತಿಯ ಚಿತ್ರಣವೇ ಬೇರೆ. ಮುಗಿಲಿಗೆ ತೂತು ಬಿದ್ದಂತೆ ಸುರಿವ ಮಳೆ. ಭೋರೆಂದು ಬೀಸುವ ಗಾಳಿ ನೆಲ ನಡುಗಿಸುವ ಗುಡುಗು ಭಾನು ಭುವಿಯನ್ನು ಒಂದಾಗಿಸುವ ಕೋಲ್ಮಿಂಚು. ಪಕ್ಕನೆ ಸಿಡಿವ ಸಿಡಿಲು. ವಾರ ಪೂರ್ತಿ ಗೈರು ಹಾಜರಾಗುವ ದಿನಮಣಿ. ವಿದ್ಯುತ್ನ ಕಣ್ಣುಮುಚ್ಚಾಲೆಯಾಟ. ಮುಂಗಾರು ಮಳೆ ಮನೆಯ ಸುತ್ತಲ ಕಾಡಿನ ಮರಗಳ ಮೇಲೆ, ಗಿರಿಗಳ ಮೇಲೆ ಬಿಡುವಿಲ್ಲದೇ ಸುರಿವಾಗ, ಮನೆ ಎದುರಿನ […]
