ಅಮ್ಮಾ ಎಂದರೆ…! ( ಹ್ಯಾಪಿ ಬರ್ತ್ ಡೇ ಅಮ್ಮಾ!) ನಮ್ಮ ಅಮ್ಮ ಲೀಲಾ ಮೂರ್ತಿಯವರ 84 ನೇ ಜನ್ಮದಿನ ಇಂದು, ಅವರ ಆಶೀರ್ವಾದಗಳು ನನ್ನ ಮೇಲಿದೆ. ನಾವು ಚೆನ್ನೈನಲ್ಲಿ, ಅಮ್ಮ ಬೆಂಗಳೂರಲ್ಲಿ ತಮ್ಮನ ಮನೆಯಲ್ಲಿ. 6 ತಿಂಗಳ ಮೇಲಾಯಿತು ದರ್ಶನವಿಲ್ಲ. ಮೊಬೈಲಿನಲ್ಲೇ ಸಂಭಾಷಣೆ. ನನ್ನ ಅಮ್ಮ ಮೊದಲಿಂದಲೂ ತಾಯಿ ಮಮತೆ ಪ್ರೀತಿಯೊಂದಿಗೆ ನನಗೆ ಸಾಹಿತ್ಯಾಸಕ್ತಿಯನ್ನೂ ಹುಟ್ಟಿನಿಂದಲೇ ಉಣಬಡಿಸಿದ್ದಾರೆ. ನಾವು ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಗಳಾಗಿ 25 ವರ್ಷ ಕಳೆದೆವು . ಆಗ 1970-80 ರ ದಶಕದಲ್ಲಿ ನಾನು ಶಾಲಾ- […]
